ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

ನ್ಯಾಷನಲ್ ಸ್ಟಾರ್ ಯಶ್ (Yash) `ಕೆಜಿಎಫ್ 2′ (Kgf 2) ಸಕ್ಸಸ್ ಖುಷಿಯಲ್ಲಿದ್ದಾರೆ. ಅವರ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಹೀಗಿರುವಾಗ ಬಹುನಿರೀಕ್ಷಿತ ಯಶ್ 19 ಸಿನಿಮಾಗೆ ಪೂಜಾ ಹೆಗ್ಡೆ (Pooja Hegde) ನಾಯಕಿ ಎನ್ನಲಾಗುತ್ತಿದೆ. ಈ ಕುರಿತ ಸುದ್ದಿಗೆ ಸ್ವತಃ ಪೂಜಾ ಹೆಗ್ಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ನಮನ ಸಲ್ಲಿಸಲು ಈ ಬಾರಿ ಸೈಮಾ ಕಾರ್ಯಕ್ರಮವನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಲಾಗಿತ್ತು. ಎಲ್ಲಾ ಭಾಷೆಯ ಕಲಾವಿದರು ಬೆಂಗಳೂರಿನಲ್ಲಿ ಸೇರಿದ್ದರು. ಇದೇ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ ಕೂಡ ಭಾಗವಹಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ನೀವು `ಯಶ್ 19′ (Yash 19) ಚಿತ್ರದಲ್ಲಿ ನಟಿಸುತ್ತಿದ್ದೀರಾ ಎಂದು ಕೇಳಿದ್ದಾರೆ. ಇದನ್ನೂ ಓದಿ:‘ಹನಿಮೂನ್’ ಗೂ ಮುನ್ನ ಮನೆದೇವರ ಆಶೀರ್ವಾದ ಪಡೆದ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್

ಈ ಪ್ರಾಜೆಕ್ಟ್ ಬಗ್ಗೆ ಯಾವುದೇ ಐಡಿಯಾ ನನಗಿಲ್ಲ. ಮುಂದೇನು ಆಗತ್ತೋ ನೋಡೋಣ ಎಂದು ಪೂಜಾ ಹೆಗ್ಡೆ ಉತ್ತರಿಸಿದ್ದಾರೆ. ನನಗೆ ಕನ್ನಡದಲ್ಲಿ ಏನಾದರೂ ಮಾಡಬೇಕು ಎಂಬ ಯೋಜನೆ ಇದೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

ದಕ್ಷಿಣದ ಸಿನಿಮಾಗಳ ಮೂಲಕ ಮೋಡಿ ಮಾಡುತ್ತಿರುವ ನಟಿ ಪೂಜಾ ಹೆಗ್ಡೆ ಯಶ್ ಮುಂದಿನ ಸಿನಿಮಾಗೆ ನಾಯಕಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *