ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಪಡೆದ ಲೋಕೇಶ್ ಪಟೇಲ್‍ಗೆ ಸನ್ಮಾನ

ಶಿವಮೊಗ್ಗ: ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭದ್ರಾವತಿಯ ಸರ್ ಎಂ.ವಿ. ಕಲೆ ಮತ್ತು ವಾಣಿಜ್ಯ ಕಾಲೇಜ್‍ನ ವಿದ್ಯಾರ್ಥಿ ಲೋಕೇಶ್ ಪಟೇಲ್‌ರನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ ಸನ್ಮಾನಿಸಿದರು.

ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ಪುರುಷರ 65 ಕೆ.ಜಿ. ವಿಭಾಗದಲ್ಲಿ ಜಿಲ್ಲೆಯ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೊಸಹಳ್ಳಿಯ ಮಂಜುನಾಥ್ ಮತ್ತು ಸರ್ವಮಂಗಳ ದಂಪತಿ ಪುತ್ರ ಲೋಕೇಶ್ ಪಟೇಲ್ ಕಂಚಿನ ಪದಕ ಪಡೆದಿದ್ದರು. ಕಳೆದ ವರ್ಷ ಪಾಂಡಿಚೇರಿಯಲ್ಲಿ ನಡೆದ ಮಿ.ಇಂಡಿಯಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಅಲ್ಲದೇ 2021ನೇ ಸಾಲಿನ ಶ್ರೀಕುವೆಂಪು ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿದ್ದರು. ಇದನ್ನೂ ಓದಿ: ರೇಪ್ ಮಾಡಿ ನನ್ನ ಸ್ನೇಹಿತನ ಪತ್ನಿಯನ್ನೇ ತುಂಡು ತುಂಡು ಕತ್ತರಿಸಿ ರಸ್ತೆಗೆ ಎಸೆದಿದ್ರು

ಸನ್ಮಾನ ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಕುಲಸಚಿವೆ ಜಿ. ಅನುರಾಧ, ಡಾ. ಎನ್.ಡಿ ವಿರೂಪಾಕ್ಷ, ಡಾ. ಬಿ.ಇ ಕುಮಾರಸ್ವಾಮಿ, ತರಬೇತುದಾರ ಶಫಿ ಮತ್ತಿತರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *