ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್

ನವದೆಹಲಿ: ಸಾರ್ವಜನಿಕ ದೂರು, ಪತ್ರಗಳು ಮತ್ತು ಮಾಧ್ಯಮ ವರದಿಗಳನ್ನು ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಧಿಕರಣ(ಎನ್‍ಜಿಟಿ) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಬಹುದು ಎಂದು ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ಹೇಳಿದೆ.

ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ನೀಡಿದ ನ್ಯಾ.ಎ.ಎಮ್ ಖಾನ್ವಿಲ್ಕರ್, ನ್ಯಾ.ಹೃಷಿಕೇಶ್ ರಾಯ್ ಮತ್ತು ನ್ಯಾ.ಸಿ.ಟಿ ರವಿಕುಮಾರ್ ಒಳಗೊಂಡ ಪೀಠ ಈ ಮಹತ್ವದ ಆದೇಶ ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯಧಿಕರಣವು ಪರಿಸರ ರಕ್ಷಣೆಗೇ ಎಂದೇ ಸ್ಥಾಪಿತವಾದ ಪೀಠ. ಪರಿಸರ ರಕ್ಷಣೆ ಉದ್ದೇಶ ಹೊಂದಿರುವ ಕಾರಣ ತನ್ನ ಗಮನಕ್ಕೆ ಬರುವ ಪ್ರಮುಖ ಬೆಳವಣಿಗಳು, ನಿಯಮಗಳ ಉಲ್ಲಂಘನೆ ಬಗ್ಗೆ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದನ್ನೂ ಓದಿ: ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

ಮುಂಬೈನ ತಾಜ್ಯ ವಿಲೇವಾರಿ ಸಂಬಂಧ ಮಾಧ್ಯಮ ವರದಿಯನ್ನು ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಧಿಕರಣ ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ವಿರುದ್ಧ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಇದರ ಜೊತೆಗೆ ಕೇರಳದಲ್ಲಿ ವಸತಿ ಪ್ರದೇಶದಿಂದ ಕಲ್ಲು ಕ್ವಾರಿಗಳ ದೂರು ನಿಗಧಿ ಮಾಡುವ ವಿಚಾರದಲ್ಲೂ ವಿವಾದವಾಗಿತ್ತು. ಇದನ್ನೂ ಓದಿ: ಜಗಳವಾಡುತ್ತಿದ್ದಾಗ ಗುಂಡಿನ ದಾಳಿ ಮಾಡಿ ಪರಾರಿಯಾದ ವಿದ್ಯಾರ್ಥಿ

ಈ ಹಿನ್ನೆಲೆ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಸೇರಿದಂತೆ ಹಲವು ಸಂಸ್ಥೆಗಳು ಮತ್ತು ಸರ್ಕಾರಗಳು ರಾಷ್ಟ್ರೀಯ ಹಸಿರು ನ್ಯಾಯಧಿಕರಣದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಪೀಠ 2010 ರ ಎನ್‍ಜಿಟಿ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಬಹುದು ಎಂದು ಹೇಳಿದೆ.

Comments

Leave a Reply

Your email address will not be published. Required fields are marked *