ಉಲ್ಟಾ ಹಾರಾಡಿದ ಸಚಿವರ ವಾಹನದ ಮುಂಭಾಗದಲ್ಲಿ ಹಾಕಿದ್ದ ರಾಷ್ಟ್ರಧ್ವಜ!

ಹಾವೇರಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ ಅವರ ಸರ್ಕಾರಿ ವಾಹನದ ಧ್ವಜ ಉಲ್ಟಾ ಹಾರಿಡಿದ ಘಟನೆ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ನಡೆದಿದೆ.

ಹಾವೇರಿ ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಸಚಿವ ಎನ್.ಮಹೇಶ ಅವರ ವಾಹನ ನಿಂತಿತ್ತು. ಬೆಳಗ್ಗೆ ವಾಹನದ ಮೇಲೆ ಧ್ವಜ ಹಾಕಿದ್ದಾರೆ. ಈ ವೇಳೆ ಧ್ವಜ ಹಾಕುವಾಗ ಹಸಿರು ಬಣ್ಣ ಮೇಲೆ ಬರುವಂತೆ ಉಲ್ಟಾ ಹಾಕಿದ್ದಾರೆ. ಆದರೆ ಶಿಕ್ಷಣ ಇಲಾಖೆ ಸಿಬ್ಬಂದಿ ಸೇರಿದಂತೆ ಕಾರ್ಯಕರ್ತರು ಮತ್ತು ಪೊಲೀಸರು ವಾಹನ ಮುಂದೆ ಓಡಾಡಿದರು ಉಲ್ಟಾ ಹಾರಿದ ಧ್ವಜವನ್ನ ಗಮನಿಸಲಿಲ್ಲ. ಇದನ್ನೂ ಓದಿ: ವಿಜಯಪುರದ ಉಸ್ತುವಾರಿ ಸಚಿವರ ಎದುರಲ್ಲೇ ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ!

ಕೇಸರಿ, ಬಿಳಿ, ಹಸಿರಿನ ಬದಲಾಗಿ ಹಸಿರು, ಬಿಳಿ ಕೇಸರಿಯಾಗಿ ಧ್ವಜ ಹಾರಾಡುತ್ತಿತ್ತು. ಇದು ಮಾಧ್ಯಮದವರ ಕಣ್ಣೀಗೆ ಬಿದ್ದಿದ್ದು, ಚಿತ್ರೀಕರಣ ಮಾಡಲು ಮುಂದಾಗಿದ್ರು. ಈ ವೇಳೆ ಇದು ಸಚಿವರ ಕಣ್ಣಿಗೆ ಬಿದ್ದಿದೆ. ಕೂಡಲೇ ಸಚಿವರ ಚಾಲಕ ಜಬಿ ಕಾರಿನಿಂದ ಇಳಿದು ರಾಷ್ಟ್ರಧ್ವಜವನ್ನ ಸರಿಪಡಿಸಿದ್ದಾರೆ.

ಈ ಹಿಂದೆ ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕಾಗಿ ಮನಗೂಳಿ ಅವರು ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ವಿದೇಶಿ ಅಧಿಕಾರಿಗಳ ಜೊತೆಗೆ ಚರ್ಚೆ ಸಂದರ್ಭದಲ್ಲಿ ಟೇಬಲ್ ಮೇಲೆ ತ್ರಿವರ್ಣ ಧ್ವಜವನ್ನು ತಲೆ ಕೆಳಗಾಗಿ ಇಡಲಾಗಿತ್ತು. ಚರ್ಚೆ ನಡೆಸುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *