ರಾಷ್ಟ್ರಪ್ರಶಸ್ತಿ ವಿಜೇತ, ನೃತ್ಯ ನಿರ್ದೇಶಕ ಶಿವಶಂಕರ್ ಕೊರೊನಾದಿಂದ ಸಾವು

ಹೈದರಾಬಾದ್: ರಾಷ್ಟ್ರ ಪ್ರಶಸ್ತಿ ವಿಜೇತ, ನೃತ್ಯ ನಿರ್ದೇಶಕ ಶಿವಶಂಕರ್ ಮಾಸ್ಟರ್(73) ಅವರು ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ.

ಶಿವಶಂಕರ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಹೈದರಾಬಾದ್‍ನ ಗಚ್ಚಿಬೌಲಿ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

CORONA-VIRUS.

ಶಿವಶಂಕರ್ ಶ್ವಾಸಕೋಶದಲ್ಲಿ ಸಂಪೂರ್ಣವಾಗಿ ಸೋಂಕು ವ್ಯಾಪಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ವ್ಯಕ್ತಿಗೆ ಕೊರೊನಾ ಪಾಸಿಟಿವ್ – ಭಾರತಕ್ಕೆ ಬಂದೇ ಬಿಡ್ತಾ ಓಮಿಕ್ರಾನ್?

ತೆಲುಗು ಮತ್ತು ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 800 ಚಿತ್ರಗಳ ಹಾಡುಗಳಿಗೆ ಶಿವಶಂಕರ್ ನೃತ್ಯ ಸಂಯೋಜನೆ ಮಾಡಿದ್ದಾರೆ. 2011 ರಲ್ಲಿ ಮಗಧೀರ ಚಿತ್ರದ ಧೀರ ಧೀರ.. ಹಾಡಿನ ನೃತ್ಯ ಸಂಯೋಜನೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

Comments

Leave a Reply

Your email address will not be published. Required fields are marked *