ನರೇಶ್-ಪವಿತ್ರಾ ಲೋಕೇಶ್ ಸೆಕೆಂಡ್ ಇನ್ನಿಂಗ್ಸ್ : ಅಸಲಿ ಬಣ್ಣ ಬಯಲು

ತೆಲುಗಿನ ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಲವ್ವಿಡವ್ವಿ ವಿಚಾರ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ವರ್ಷದ ಮೊದಲ ದಿನದಿಂದ ಈವರೆಗೂ ಒಂದಿಲ್ಲೊಂದು ವಿಚಾರಕ್ಕಾಗಿ ಈ ಇಬ್ಬರೂ ಸುದ್ದಿಯಲ್ಲಿದ್ದಾರೆ. ಮದುವೆ, ಹನಿಮೂನ್ ಅಂತೆಲ್ಲ ಫೋಟೋ ಹಂಚಿಕೊಳ್ಳುತ್ತಿದ್ದವರ ನಿಜಬಣ್ಣ ಈಗ ಬಯಲಾಗುತ್ತಿದೆ. ಈ ಎಲ್ಲವೂ ಖಾಸಗಿ ವಿಚಾರವಲ್ಲ, ಅವು ಸಿನಿಮಾಗಾಗಿ ಮಾಡಿದ ದೃಶ್ಯಗಳು ಎಂದು ನಿರ್ದೇಶಕ ಎಂ.ಎಸ್.ರಾಜು (MS Raju) ಹೇಳಿಕೊಂಡಿದ್ದಾರೆ.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ರಾಜು. ಅವರವರ ಪಾತ್ರಗಳನ್ನು ಅವರೇ ಮಾಡಿದ್ದಾರಂತೆ. ಅಲ್ಲದೇ, ನರೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಸೆಕೆಂಡ್ ಇನ್ನಿಂಗ್ಸ್ (Second Innings) ಎಂದು ಹೆಸರಿಡಲಾಗಿದ್ದು, ಈ ಕುರಿತು ಅಧಿಕೃತವಾಗಿ ನರೇಶ್ ಅವರೇ ಮುಂದಿನ ದಿನಗಳಲ್ಲಿ ಹೇಳಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ಮದುವೆ ಫೋಟೋ ರಿಲೀಸ್ ಆದ ಬೆನ್ನಲ್ಲೇ ಸದ್ದಿಲ್ಲದೇ ದುಬೈಗೆ (Dubai) ಹಾರಿದ್ದರು. ಕೆಲ ದಿನಗಳ ಕಾಲ (Honeymoon) ದುಬೈನಲ್ಲಿ ಈ ಜೋಡಿ ಕಳೆದಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನಿನ್ನೆಯಷ್ಟೇ ಮದುವೆ (Marriage) ಆಗಿದ್ದೇವೆ ಎನ್ನುವ ಅರ್ಥದಲ್ಲಿ ವಿಡಿಯೋ ಶೇರ್ ಮಾಡಿದ್ದ ನರೇಶ್, ನಂತರ ಅವರು ದುಬೈನಲ್ಲಿ ಕಾಲ ಕಳೆದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದವು. ದುಬೈನ ಬೇರೆ ಬೇರೆ ಸ್ಥಳಗಳಲ್ಲಿ ಸೆರೆ ಹಿಡಿಯಲಾದ ಫೋಟೋಗಳು ಕೂಡ ಅವಾಗಿದ್ದವು.

ಹೊಸ ವರ್ಷದ ದಿನದಂದು ಪವಿತ್ರಾ ಲೋಕೇಶ್ ತುಟಿಗೆ ಮುತ್ತಿಡುವ ಮೂಲಕ ತಾವು ಮದುವೆ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು ತೆಲುಗು ನಟ ನರೇಶ್. ಅದೊಂದು ಮದುವೆಯ ಆಮಂತ್ರಣ ಎನ್ನುವಂತೆ ವಿಡಿಯೋ ಮಾಡಿದ್ದರು. ಈ ವಿಡಿಯೋ ರಿಲೀಸ್ ಆಗಿ ಕೆಲವು ದಿನಗಳ ನಂತರ, ಅದೊಂದು ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ವಿಡಿಯೋ ಎಂದು ಹೇಳಲಾಯಿತು. ಈ ವಿಚಾರವಾಗಿ ನರೇಶ್ ಪತ್ನಿ ರಮ್ಯಾ ಗರಂ ಕೂಡ ಆದರು.

Comments

Leave a Reply

Your email address will not be published. Required fields are marked *