ಪ್ರಧಾನ ಸೇವಕನ ಜನ್ಮದಿನ – 67ನೇ ಹುಟ್ಟುಹಬ್ಬದಂದು ಮೋದಿಗೆ ತಾಯಿ ಆರ್ಶೀವಾದ

– ಸೇವಾ ದಿನದ ಹೆಸರಲ್ಲಿ ಸ್ವಚ್ಛತಾ ಅಭಿಯಾನ

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ. ಸ್ವತಂತ್ರ ಭಾರತದ ಬಳಿಕ ಜನಿಸಿದ ಮೊದಲ ಪ್ರಧಾನಿಯೆಂಬ ಹೆಗ್ಗಳಿಗೆ ಪಾತ್ರವಾಗಿರುವ ನರೇಂದ್ರ ದಾಮೋದರ ದಾಸ್ ಮೋದಿಗೆ ಇವತ್ತು 67 ವರ್ಷ ತುಂಬಿದೆ.

ತನ್ನ ಪರಮೋಚ್ಛ ನಾಯಕನ ಜನ್ಮದಿನವನ್ನು ಬಿಜೆಪಿ ಸೇವಾ ದಿನವನ್ನಾಗಿ ಆಚರಿಸುತ್ತಿದೆ. ಇನ್ನು ಮೂರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಗುಜರಾತ್‍ನಲ್ಲೇ ತಮ್ಮ ಇಡೀ ದಿನವನ್ನು ಕಳೆಯಲಿರುವ ಪ್ರಧಾನಿ, ಗಾಂಧಿನಗರಕ್ಕೆ ಭೇಟಿ ನೀಡಿದ ಪ್ರಧಾನಿ ತಮ್ಮ ತಾಯಿಯ ಆರ್ಶೀವಾದ ಪಡೆದರು.

ಪಕ್ಷದ ನಾಯಕರ ದಂಡೇ ಪ್ರಧಾನಿ ಹುಟ್ಟುಹಬ್ಬವನ್ನು ಸೇವಾ ದಿನವಾಗಿ ಆಚರಿಸಲು ನಿರ್ಧರಿಸಿದೆ. ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸೇವಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದು ಸ್ವಚ್ಛತಾ ಅಭಿಯಾನ ಕೈಗೊಳ್ಳಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಂಚಿಯಲ್ಲಿರಲಿದ್ದಾರೆ. ಬೆಂಗಳೂರಲ್ಲಿ ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿವಿ ಸದಾನಂದಗೌಡ ಕೂಡಾ ಸ್ವಚ್ಛತಾ ಅಭಿಯಾನ ಕೈಗೊಳ್ಳಲಿದ್ದಾರೆ.

2014ರ ಲೋಕಸಭಾ ಚುನಾವಣೆಯ ಬಳಿಕ ಪ್ರಧಾನಿ ಮೋದಿ ಮೂರು ವರ್ಷದಲ್ಲಿ ತೆಗೆದುಕೊಂಡ ಕ್ರಮಗಳು ಏನು ಅಂತಾ ನೋಡೋದಾದ್ರೆ:

ನೋಟು ಅಮಾನ್ಯ– ಕಪ್ಪು ಹಣ ನಿಗ್ರಹಕ್ಕೆ ನೋಟು ಅಮಾನ್ಯ
ಸರ್ಜಿಕಲ್ ಸ್ಟ್ರೈಕ್- ಉಗ್ರರ ಅಡಗುತಾಣಗಳ ಮೇಲೆ ದಾಳಿ
ಜನಧನ್ ಯೋಜನೆ– 11.5 ಕೋಟಿ ಬ್ಯಾಂಕ್ ಖಾತೆ ಆರಂಭ- ಇದು ವಿಶ್ವದಾಖಲೆ
ಜಿಎಸ್‍ಟಿ– ಒಂದೇ ದೇಶ, ಒಂದೇ ತೆರಿಗೆ
ಬುಲೆಟ್ ಟ್ರೈನ್– ಈಗ ಶಂಕುಸ್ಥಾಪನೆ, 2022ಕ್ಕೆ ಚಾಲನೆ
ಮೇಕ್ ಇನ್ ಇಂಡಿಯಾ– ಸ್ವದೇಶದಲ್ಲಿ ನಿರ್ಮಾಣಕ್ಕೆ ಒತ್ತು
ಸ್ವಚ್ಛ ಭಾರತ– ಸ್ವಚ್ಛಗೊಂಡಿರುವ ಕೆಲವು ಗ್ರಾಮಗಳು
ನೆರೆಹೊರೆ ಬಾಂಧವ್ಯ– ಹೊರ ದೇಶದೊಂದಿಗೆ ಬಾಂಧವ್ಯ ನಿರ್ಮಾಣ
ಎಫ್‍ಡಿಐ ಸುಧಾರಣೆ– ರೈಲ್ವೆಯಲ್ಲಿ ಶೇ100, ರಕ್ಷಣೆಗೆ ಶೇ.49 ಹೂಡಿಕೆ
ಬೇಟಿ ಬಚಾವೋ; ಪಡಾವೋ– ಹೆಣ್ಣು ಭ್ರೂಣ ಹತ್ಯೆಗೆ ಯೋಜನೆ

Comments

Leave a Reply

Your email address will not be published. Required fields are marked *