ಕರ್ನಾಟಕದ ನನ್ನ ಸಹೋದರ, ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು: ಮೋದಿ

ನವದೆಹಲಿ: ರಾಷ್ಟ್ರದ ಪ್ರಗತಿಗೆ ಅಭೂತಪೂರ್ವ ಕೊಡುಗೆ ನೀಡುತ್ತಿರುವ ಕರ್ನಾಟಕದ ನನ್ನ ಸಹೋದರರು ಮತ್ತು ಸಹೋದರಿಯರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಮಕರ ಸಂಕ್ರಾಂತಿ ಹಬ್ಬದ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ರಾಷ್ಟ್ರದ ಪ್ರಗತಿಗೆ ಅಭೂತಪೂರ್ವ ಕೊಡುಗೆ ನೀಡುತ್ತಿರುವ ಕರ್ನಾಟಕದ ನನ್ನ ಸಹೋದರರು ಮತ್ತು ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ರಾಜ್ಯದ ಜನರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾ ಶ್ರಮಿಸಲಿವೆ ಎಂದು ಪ್ರಧಾನಿ ತಮ್ಮ ಟ್ವೀಟ್‍ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ:  ಸಂಕ್ರಾಂತಿಗೆ ಅಮೂಲ್ಯ ಮನೆಗೆ ಗಂಗೆ, ದ್ರೌಪದಿ ಆಗಮನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ಅವರಿಗೆ ಸಂಕ್ರಾಂತಿಯ ಶುಭಾಶಯಗಳು. ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ 18,78,671 ವಸತಿ ರಹಿತರಿಗೆ ಮತ್ತು 6,61,535 ನಿವೇಶನ ರಹಿತ ಕುಟುಂಬಗಳ ಸಿಂಕ್ರನೈಸೇಶನ್‍ಗೆ ಅನುಮತಿ ನೀಡಿದ್ದಕ್ಕೆ ಧನ್ಯವಾದ. ಕೇಂದ್ರವು ಜನರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರದೊಂದಿಗೆ ಎಂದಿಗೂ ಶ್ರಮಿಸಲಿದೆ ಎಂದು ಮೋದಿ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:  ಶಬರಿಮಲೆ ಅಯ್ಯಪ್ಪನಿಗೆ ವಜ್ರದ ಕಿರೀಟ ಕಾಣಿಕೆ ಕೊಟ್ಟ ಭಕ್ತ

Comments

Leave a Reply

Your email address will not be published. Required fields are marked *