ವಿಶ್ವದ 2ನೇ ದೊಡ್ಡ ಡ್ಯಾಂ ಲೋಕಾರ್ಪಣೆ – 30 ಗೇಟ್‍ಗಳಲ್ಲಿ ನುಗ್ಗಲಿದೆ ನರ್ಮದಾ ನೀರು

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ 67ನೇ ಹುಟ್ಟುಹುಬ್ಬ. ಹೀಗಾಗಿ ಇಂದೇ ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ರಾಜ್ಯ ಗುಜರಾತ್‍ನಲ್ಲಿ ನಿರ್ಮಾಣವಾಗಿರುವ ಸರ್ದಾರ್ ಸರೋವರ್ ಅಣೆಕಟ್ಟನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಇಂದು ಬೆಳಗ್ಗೆ ಡ್ಯಾಂನ್ನು ಲೋಕಾರ್ಪಣೆ ಮಾಡಲಿದ್ದಾರೆ. 1961ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಶಂಕುಸ್ಥಾಪನೆ ನೆರವೇರಿಸಿದ್ದ ಯೋಜನೆ 56 ವರ್ಷಗಳ ಬಳಕೆಗೆ ಬರಲಿದೆ.

ನರ್ಮದಾ ನದಿ ಅಡ್ಡಲಾಗಿ ಕಟ್ಟಲಾಗಿರುವ ಜಲಾಶಯ ವಿಶ್ವದ 2ನೇ ಅತೀ ದೊಡ್ಡ ಡ್ಯಾಂ ಆಗಿದೆ. ಈ ಯೋಜನೆಯಿಂದ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರಕ್ಕೆ ಲಾಭದಾಯಕವಾಗಲಿದೆ. ಅಣೆಕಟ್ಟಿನ ಒಟ್ಟು ಎತ್ತರ 138.68 ಮೀಟರ್‍ಗಳು. ನೀರು ಸಂಗ್ರಹ ಸಾಮರ್ಥ್ಯ 4.73 ದಶ ಲಕ್ಷ ಕ್ಯೂಬಿಕ್ ಮೀಟರ್. ಈ ಅಣ್ಣೆಕಟ್ಟಿನ ಉದ್ದ ಬರೋಬ್ಬರೀ 1.2 ಕಿಲೋ ಮೀಟರ್.

ಗುಜರಾತ್‍ನ 18 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿನ 10 ಲಕ್ಷ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಿದೆ. 9,490 ಹಳ್ಳಿಗಳು, 173 ಪಟ್ಟಣಗಳಲ್ಲಿನ 3 ಕೋಟಿ ಮಂದಿಗೆ ಕುಡಿಯುವ ನೀರು ಲಭ್ಯವಾಗಲಿದೆ. 1,450 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು ಅದು ರಾಜ್ಯಗಳ ನಡುವೆ ಹಂಚಿಕೆಯಾಗಲಿದೆ. ಈ ಡ್ಯಾಂನಿಂದ ಗುಜರಾತ್‍ನಲ್ಲಿ 75 ಸಾವಿರ ಕಿಲೋ ಮೀಟರ್ ದೂರಕ್ಕೆ ಕಾಲುವೆ ಸಂಪರ್ಕ ಹೊಂದಿದೆ. ಅಣೆಕಟ್ಟಿಗೆ 30 ಗೇಟ್ ಇದೆ. ಪ್ರತಿಯೊಂದು 450 ಟನ್ ಭಾರವಿದ್ದು, ಒಂದೊಂದು ಗೇಟ್ ಮುಚ್ಚಲು ಒಂದೊಂದು ಗಂಟೆ ಬೇಕಾಗುತ್ತದೆ.

ಈ ಬಗ್ಗೆ ಪ್ರಧಾನಿ ಶನಿವಾರ ಟ್ವೀಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *