ಮೋದಿ-ರಾಮದಾಸ್ ಇಬ್ರೂ ಬ್ಯಾಚುಲರ್ಸು, ತಬ್ಬಾಡಿದ್ರು: KPCC ವಕ್ತಾರ ಎಂ.ಲಕ್ಷ್ಮಣ್‌ ವ್ಯಂಗ್ಯ

ಮೈಸೂರು: ಪ್ರಧಾನಿ ನರೇಂದ್ರ ಮೋದಿ, ಎಸ್.ಎ.ರಾಮದಾಸ್ ಇಬ್ಬರೂ ಬ್ಯಾಚುಲರ್ಸು ವೇದಿಕೆಯಲ್ಲಿ ತಬ್ಬಾಡಿದ್ರು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ವ್ಯಂಗ್ಯವಾಡಿದ್ದಾರೆ.

ಮೈಸೂರಿನ ಇಂದಿರಾಗಾಧಿ ಕಾಂಗ್ರೆಸ್ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ, ಶಾಸಕ ಎಸ್.ಎ.ರಾಮದಾಸ್ ಇಬ್ಬರೂ ಬ್ಯಾಚೂಲರ್ಸ್. ವೇದಿಕೆ ಮೇಲೆ ಮೋದಿ ಅವರು ರಾಮದಾಸ್ ಅವರನ್ನು ತಬ್ಬಾಡಿದ್ರು. ವೇದಿಕೆಯಲ್ಲಿ ಯಾರೂ ಇಲ್ಲದಿದ್ರೆ ಇನ್ನೂ ಏನೇನೂ ಆಗ್ತಿತ್ತೋ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದೇವೇಗೌಡ ಬಗ್ಗೆ ಮಾತಾಡಿದ್ರೆ ಹುಷಾರ್ – ಅವರ ಮಗ ನಾನು ಬದುಕಿದ್ದೇನೆ: ರಾಜಣ್ಣ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಈಚೆಗಷ್ಟೇ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಮೈಸೂರಿಗೆ ತೆರಳಿದ್ದ ವೇಳೆ, ಅಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ರಾಮದಾಸ್ ಅವರನ್ನು ಹತ್ತಿರ ಕರೆದು ಆಪ್ತತೆಯಿಂದ ಬೆನ್ನಿಗೆ ಗುದ್ದನ್ನು ನೀಡಿದ್ದರು. ಇದನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ವ್ಯಂಗ್ಯವಾಡಿದರು. ಇದನ್ನೂ ಓದಿ: ತೆಲುಗಿನ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಯಶ್ ಅತಿಥಿ ಪಾತ್ರ?

ಸ್ಟೇ ಹಿಂಪಡೀರಿ-ಸಿಡಿ ರಿಲೀಸ್ ಮಾಡ್ತೀನಿ: ನಿಮ್ಮ ಅನಾಚಾರಗಳು 17 ಎಪಿಸೋಡ್‌ಗೆ ಆಗುವಷ್ಟು ಸಿಡಿಗಳು ನನ್ನ ಬಳಿಯಿವೆ. ನೀವು ಪ್ರಾಮಾಣಿಕರಾದ್ರೆ ತಡೆಯಾಜ್ಞೆ ರದ್ದುಗೊಳಿಸಿ. ಆ ಮೇಲೆ ನಿಮ್ಮ ಬಂಡವಾಳ ಬಯಲಾಗುತ್ತೆ ಎಂದು ಎಂ.ಲಕ್ಷ್ಮಣ್‌ ಸಂಸದ ಪ್ರತಾಪ್‌ಸಿಂಹಗೆ ಕುಟುಕಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕ್ರೆಡಿಟ್ ಜಗಳ ತಾರಕಕ್ಕೇರಿದ್ದು ಬಹಿರಂಗ ಚರ್ಚೆಗೆ ಮತ್ತೆ ದಿನಾಂಕ ನಿಗದಿ ಮಾಡಿ ಮಾತನಾಡಿದ ಎಂ. ಲಕ್ಷ್ಮಣ್‌, ಪ್ರತಾಪ್ ಸಿಂಹ ನನ್ನನ್ನ ಹಂದಿ, ಕತ್ತೆಗೆ ಹೋಲಿಸಿದ್ದೀರಿ. ಜುಲೈ 5 ರಂದು ಎರಡು ಹಂದಿ ಹಾಗೂ ಎರಡು ಕತ್ತೆಗಳ ಜೊತೆಗೆ ಬರುತ್ತೇವೆ. ಕಾಂಗ್ರೆಸ್ ಕಚೇರಿಯಿಂದ ಸಂಸದರ ಕಚೇರಿವರೆಗೆ ಮೆರವಣಿಗೆ ಬರುತ್ತೇವೆ. ಚರ್ಚೆಗೆ ಹಂದಿ ಹೊಡೆಯೋರು ಬೇಡ. ತಿಳುವಳಿಕೆ ಇರುವವರನ್ನು ಕಳುಹಿಸಿ. ಸಾಯುವವರೆಗೂ ನಾನೇ ಗೆಲ್ಲುತ್ತೇನೆ ಎನ್ನುವಂತೆ ನಡೆದುಕೊಳ್ಳುತ್ತೀರಿ. 2023ರಲ್ಲಿ ನೀವು ಹೇಗೆ ಗೆಲ್ಲುತ್ತೀರಾ? ನೋಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

ನಮ್ಮ ಚರ್ಚೆಗೆ ಪೊಲೀಸರು ಅವಕಾಶ ಕೊಡಬೇಕು. ಪ್ರತಾಪ್ ಸಿಂಹ ರೀತಿ ನಾನು ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿಸಿಕೊಂಡಿಲ್ಲ. ನಿಮ್ಮ ರೀತಿ ಹೆಂಡತಿಯನ್ನ ತಂಗಿ ಎಂದು ಮೂಡಾ ಸೈಟ್ ಪಡೆದಿಲ್ಲ. ಮೆಗಾ ಗ್ಯಾಸ್ ಯೋಜನೆಯಡಿ 50 ಕೋಟಿ ಲಂಚ ಪಡೆದಿದ್ದೀರಿ ಎಂಬ ಆರೋಪವಿದೆ. ನಿಮ್ಮ ಪಕ್ಷದ ಶಾಸಕರೇ ಇದನ್ನ ಹೇಳ್ತಿದ್ದಾರೆ ಎಂದು ಕುಟುಕಿದ್ದಾರೆ.

Live Tv

Comments

Leave a Reply

Your email address will not be published. Required fields are marked *