ಇಂಡಿಯಾದಲ್ಲಿ ಮೋದಿ ಸಾಹೇಬ್ರು ಒಬ್ಬರೇ ಸ್ಟಾರ್ ಪ್ರಚಾರಕರು: ಸಂತೋಷ್ ಲಾಡ್

ರಾಯಚೂರು: ಇಂಡಿಯಾದಲ್ಲಿ ಒಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ, ಅವರೇ ಮೋದಿ (Narendra Modi) ಸಾಹೇಬ್ರು. ಎಲ್ಲಾ ಪಾರ್ಟಿ ಪ್ರಚಾರನೂ ಅವರಿಗೆ ಕೊಟ್ಟು ಬಿಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.

ರಾಯಚೂರಿನಲ್ಲಿ ನಡೆದ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರ ಲಿಸ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಇಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸಿಎಂ ಸಿದ್ದರಾಮಯ್ಯ ಸಾಮಾನ್ಯವಾಗಿ ಬೇರೆ ರಾಜ್ಯಕ್ಕೆ ಹೋಗಲ್ಲ. ಇಂಡಿಯಾದಲ್ಲಿ ಒಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ, ಅವರೇ ಮೋದಿ ಎಂದರು. ಇದನ್ನೂ ಓದಿ: ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ & ಕೊಲೆ ಕೇಸ್‌ – ಅಪರಾಧಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ

ಅವರಿಗೆ ಫುಲ್ ಟೈಂ ಇದೆ. ಇಡೀ ದೇಶದಲ್ಲಿ, ರಾಜ್ಯಗಳಲ್ಲಿ ಓಡಾಡೋಕೆ, ಎಲ್ಲಾ ಚುನಾವಣೆ ಭಾಷಣ ಮಾಡಲು ಟೈಂ ಇದೆ. ಒಂದೊಂದು ರಾಜ್ಯಕ್ಕೆ ಮೂವತ್ತು, ನಲವತ್ತು, ಐವತ್ತು ಸಾರಿ ಬರೋಕೆ ಟೈಂ ಇದೆ. ಹಾಗಾಗಿ ಅವರೊಬ್ಬರೇ ಸ್ಟಾರ್ ಪ್ರಚಾರಕರು ಎಂದು ಹೇಳಿದರು. ಇದನ್ನೂ ಓದಿ: ಮೊದಲು ಕಾಂಗ್ರೆಸ್ ಶಾಸಕರನ್ನ ಉಳಿಸಿಕೊಳ್ಳಲಿ: ಎಂ.ಬಿ ಪಾಟೀಲ್‌ಗೆ ವಿಜಯೇಂದ್ರ ಟಕ್ಕರ್

ಇನ್ನೂ ಬೆಳಗಾವಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತ್ಯಾಗದ ಬಗ್ಗೆ ಮಾತನಾಡಿರೊ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಷಯ ಡಿಕೆ ಶಿವಕುಮಾರ್ ಹೇಳಿದ್ದು, ಅವರನ್ನೇ ಕೇಳಿ. ನನ್ನನ್ನು ಕೇಳಿದರೆ ಹೇಗೆ? ನಾನು ಹೇಗೆ ಹೇಳಲಿ? ಅವರಿಗೆ ಈ ಪ್ರಶ್ನೆ ಕೇಳಿ. ನೀವು ಎಷ್ಟೇ ಚಾವಿ (ಕೀ) ಕೊಟ್ಟರೂ ನಾನು ಹೇಳಲ್ಲ ಎಂದು ನುಡಿದರು. ಇದನ್ನೂ ಓದಿ: ಕಾರ್ಮಿಕರ ಹಲ್ಲೆ ಖಂಡನೀಯ, ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ – ಎಂ.ಬಿ ಪಾಟೀಲ್