ವಿಐಪಿ ವಾಹನಗಳ ಮೇಲೆ ಕೆಂಪು/ನೀಲಿ ದೀಪ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಇನ್ಮುಂದೆ ದೇಶದ ರಾಷ್ಟ್ರಪತಿ, ಪ್ರಧಾನಿ, ನ್ಯಾಯಾಧೀಶರು ಸೇರಿದಂತೆ ಗಣ್ಯ ವ್ಯಕ್ತಿಗಳು ತಮ್ಮ ಕಾರಿನ ಮೇಲೆ ಕೆಂಪು ಹಾಗೂ ನೀಲಿ ದೀಪಗಳನ್ನ ಬಳಸುವಂತಿಲ್ಲ.

ಹೌದು. ವಿಐಪಿ ಸಂಪ್ರದಾಯಕ್ಕೆ ಕೊನೆಹಾಡುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರದಂದು ಈ ತೀರ್ಮಾನ ಕೈಗೊಂಡಿದ್ದು, ಗಣ್ಯ ವ್ಯಕ್ತಿಗಳ ಕಾರಿನಲ್ಲಿ ನೀಲಿ ಹಾಗೂ ಕೆಂಪು ದೀಪಗಳ ಬಳಕೆಯನ್ನ ನಿಷೇಧಿಸಿದೆ. ಈ ನಿಯಮ ಮೇ 1ರಿಂದಲೇ ಜಾರಿಗೆ ಬರಲಿದೆ.

ಆದ್ರೂ ಆಂಬುಲೆನ್ಸ್ ಗಳಂತಹ ತುರ್ತು ಸೇವೆ ಒದಗಿಸುವ ವಾಹನಗಳಲ್ಲಿ ಕೆಂಪು ದೀಪಗಳನ್ನ ಬಳಸಬಹುದಾಗಿದೆ.

ಈಗಾಗಲೇ ಹೊಸದಾಗಿ ರಚನೆಯಾಗಿರೋ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಹಾಗೂ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ವಿಐಪಿ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನ ನಿಷೇಧಿಸಿವೆ.

Comments

Leave a Reply

Your email address will not be published. Required fields are marked *