ಟ್ಯಾಟೂ ಕಂಡು ಮೋದಿ ಖುಷ್- ಭಾಷಣದಲ್ಲಿ ಅಭಿಮಾನಿಗೆ ಬುದ್ಧಿಮಾತು

ರಾಯಚೂರು: ಬೆನ್ನ ತುಂಬಾ ಮೋದಿ ಟ್ಯಾಟೋ ಹಾಕಿಸಿಕೊಂಡು ನೆಚ್ಚಿನ ಪ್ರಧಾನಿಯನ್ನ ನೋಡಲು ಕಾಯುತ್ತಿದ್ದ ಅಭಿಮಾನಿಯ ಅಭಿಮಾನಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೆ ಸೋತು ಹೋಗಿದ್ದಾರೆ.

ನಗರದಲ್ಲಿ ನಡೆದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಮೋದಿಯವರ ಅಭಿಮಾನಿ ದೇವದುರ್ಗದ ಬಸವರಾಜ್ ಮಡಿವಾಳ ಟ್ಯಾಟೋ ವನ್ನ ಬಹಿರಂಗವಾಗಿ ತೋರಿಸಿದರು. ಇದನ್ನ ನೋಡಿದ ಮೋದಿ ನಿಮ್ಮ ಅಭಿಮಾನಕ್ಕೆ ನಾನು ಅಭಾರಿಯಾಗಿದ್ದೇನೆ. ಆದರೆ ಯುವಕರು ಅಭಿಮಾನ ತೋರಿಸಲು ದೇಹದಂಡನೆ ಮಾಡುವುದು ಒಳ್ಳೆಯದಲ್ಲ. ಬಹಳಷ್ಟು ಗಂಟೆಗಳ ಕಾಲ ದೇಹವನ್ನು ದಂಡಿಸುವುದು ಸರಿಯಲ್ಲ. ಈ ರೀತಿ ಮಾಡಬೇಡಿ ಎಂದು ನಾನು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.

ಈಗಾಗಲೇ ಶಿವಾಜಿ, ಉಪೇಂದ್ರ, ಯಶ್ ಅಭಿಮಾನಿಗಳಿಗೆ ಟ್ಯಾಟೋ ಹಾಕಿದ್ದ ಕಲಾವಿದ ಶಂಕರ್ ಬದಿ ಬಸವರಾಜ್ ಬೆನ್ನ ಮೇಲೆ ಮೋದಿಯ ಟ್ಯಾಟೋ ಬಿಡಿಸಿದ್ದಾರೆ. ಟ್ಯಾಟೋ ಬಿಡಿಸಲು 15 ಗಂಟೆ ತೆಗೆದುಕೊಂಡಿದ್ದರು.

ಮೋದಿಯವರನ್ನು ಭೇಟಿಯಾಗಲೇ ಬೇಕು ಅಂತ ಪಣತೊಟ್ಟು ಬಸವರಾಜ್ ತನ್ನ ಅಭಿಮಾನವನ್ನ ವ್ಯಕ್ತಪಡಿಸಲು ಟ್ಯಾಟೋ ಹಾಕಿಸಿಕೊಂಡಿದ್ದರು. ಅಲ್ಲದೆ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಮೇಲೂ ಅಭಿಮಾನ ಇರುವುದರಿಂದ ತನ್ನ ಬಲಗೈ ಮೇಲೆ ಶಿವನಗೌಡರ ಟ್ಯಾಟೋವನ್ನೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೋಗಳು ಶಾಶ್ವತ ಟ್ಯಾಟೋಗಳಾಗಿದ್ದು ಅಳಿಸಲು ಸಾಧ್ಯವಿಲ್ಲ.

ಮೋದಿ ತಮ್ಮನ್ನು ಗುರುತಿಸಿ ಮಾತನಾಡಿದ್ದಕ್ಕೆ ಬಸವರಾಜ್ ಹಾಗೂ ಟ್ಯಾಟೋ ಕಲಾವಿದ ಶಂಕರ್ ಸಂತೋಷ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *