‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಾರಾಷ್ಟ್ರಕ್ಕೆ ಹೋಗಲಿ’

– ಸಚಿವ ನಾರಾಯಣಗೌಡ ಪ್ರತಿಕೃತಿ ದಹಿಸಿ ಮಂಡ್ಯದಲ್ಲಿ ಪ್ರತಿಭಟನೆ

ಮಂಡ್ಯ: ಮಹಾರಾಷ್ಟ್ರದ ಪರ ಜೈಕಾರ ಕೂಗಿರುವುದಕ್ಕೆ ಸಚಿವ ನಾರಾಯಣಗೌಡ ವಿರುದ್ಧ ಆಕ್ರೋಶ ತೀವ್ರಗೊಂಡಿದ್ದು, ಸಚಿವರ ಪ್ರತಿಕೃತಿ ದಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಮಹಾವೀರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಚಿವ ನಾರಾಯಣ ಗೌಡರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಎಂದರೆ ಮಂಡ್ಯ ಎನ್ನುವಷ್ಟರ ಮಟ್ಟಿಗೆ ಹೆಸರಿದೆ. ಹೀಗಿರುವಾಗ ಈ ನೆಲದಲ್ಲಿ ನಿಂತುಕೊಂಡು ಸಚಿವ ನಾರಾಯಣಗೌಡರು ಮಹಾರಾಷ್ಟ್ರಕ್ಕೆ ಜೈಕಾರ ಕೂಗುವುದು ಖಂಡನೀಯ. ಭಾಷೆ ಹಾಗೂ ನೆಲದ ವಿಚಾರದಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

ಸಚಿವರಿಗೆ ಮಹಾರಾಷ್ಟ್ರದ ಮೇಲೆ ಅಭಿಮಾನ ಇದ್ದರೆ ಅಲ್ಲಿಯೇ ಹೋಗಿ ಇರಲಿ. ಅದನ್ನು ಬಿಟ್ಟು ಇಲ್ಲಿ ಮಹಾರಾಷ್ಟ್ರದ ಪರ ಘೋಷಣೆ ಕೂಗುವುದು ತಪ್ಪು. ನಾರಾಯಣಗೌಡರು ಎಸಗಿರುವ ಈ ಅನ್ಯಾಯಕ್ಕೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಾರಾಷ್ಟ್ರಕ್ಕೆ ಹೋಗಲಿ ಎಂದು ಘೋಷಣೆ ಕೂಗಿದರು. ಇದೇ ವೇಳೆ ನಾರಾಯಣಗೌಡ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *