ನ್ಯಾಚುರಲ್ ಸ್ಟಾರ್ ನಾನಿಗೆ ಕನ್ನಡತಿ ಪ್ರಿಯಾಂಕಾ ಮೋಹನ್ ಜೋಡಿ

ನ್ಯಾಚುರಲ್ ಸ್ಟಾರ್ ನಾನಿ (Natural Star Nani) ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಸರಿಪೋಧಾ ಸನಿವಾರಮ್’ (Saripodhaa Sanivaaram) ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗ ನಾನಿಗೆ ಜೋಡಿಯಾಗುವ ನಾಯಕಿಯ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಕನ್ನಡತಿ ಪ್ರಿಯಾಂಕಾ ಮೋಹನ್ (Priyanka Mohan) ಅವರು ನಾನಿಗೆ ಮತ್ತೊಮ್ಮೆ ಜೋಡಿಯಾಗಿದ್ದಾರೆ.

ಬೆಂಗಳೂರಿನ ಬೆಡಗಿ ಪ್ರಿಯಾಂಕಾ ಮೋಹನ್ ಈಗ ತೆಲುಗು, ತಮಿಳು ಸಿನಿಮಾದಲ್ಲಿ ಗುರುತಿಸಿಕೊಳ್ತಿದ್ದಾರೆ. ಸದ್ಯ ನಾನಿ ಸಿನಿಮಾದಲ್ಲಿನ‌ ಪ್ರಿಯಾಂಕಾ ಲುಕ್ ರಿವೀಲ್ ಆಗಿದೆ. ಪೊಲೀಸ್ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಚಾರುಲತಾ ಎಂಬ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರಕ್ಕೆ 30 ಲಕ್ಷ ಸಂಭಾವನೆ: ಶಾನ್ವಿ ಶ್ರೀವಾಸ್ತವ್

ಈ ಹಿಂದೆ ನಾನಿಗೆ ಹೀರೋಯಿನ್ ಆಗಿ ‘ಗ್ಯಾಂಗ್ ಲೀಡರ್’ ಎಂಬ ಸಿನಿಮಾ ಮಾಡಿದ್ದರು. ಈ ಚಿತ್ರವನ್ನು ವಿವೇಕ್ ಆತ್ರೇಯಾ ನಿರ್ದೇಶನ ಮಾಡಿದ್ದರು. ಈಗ ನಾನಿ ಮತ್ತು ಪ್ರಿಯಾಂಕಾ ಹೊಸ ಚಿತ್ರಕ್ಕೂ ಅವರೇ ನಿರ್ದೇಶನ ಮಾಡ್ತಿದ್ದಾರೆ.

ಅಂದಹಾಗೆ, ಪ್ರಿಯಾಂಕಾ ಸೌತ್‌ನಲ್ಲಿ ಗುರುತಿಸಿಕೊಳ್ಳುವ ಮುನ್ನ ಕನ್ನಡದ ‘ಒಂದ್ ಕಥೆ ಹೇಳ್ಲಾ’ ಎಂಬ ಸಿನಿಮಾ ಮಾಡಿದ್ದರು. 2019ರಲ್ಲಿ ಈ ಸಿನಿಮಾ ತೆರೆಕಂಡಿತ್ತು.