ಕೆಎಂಎಫ್ ಹಾಲು ವಿತರಣೆಯಲ್ಲಿ ತೊಂದರೆ- ನಂದಿನಿ ಬೂತ್‍ಗಳಿಗೆ ಅರ್ಧಕರ್ಧ ಸಪ್ಲೈ

ಬೆಂಗಳೂರು: ಸಿಲಿಕಾನ್ ಸಿಟಿಗೆ ಈಗ ಕೆಎಂಎಫ್ (KMF) ಬಿಗ್ ಶಾಕ್ ಕೊಟ್ಟಿದೆ. ನಂದಿನಿ ಹಾಲಿ (Nandini Milk) ನ ಕೊರತೆ ಈಗ ಎದುರಾಗಿದ್ದು, ನಂದಿನಿ ಬೂತ್‍ನವರಿಗೆ ಕಿರಿಕಿರಿ ಆರಂಭವಾಗಿದೆ. ಅತ್ತ ಸಾರ್ವಜನಿಕರು ಕೂಡ ಪರದಾಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು. ಏಕಾಏಕಿ ನಂದಿನಿ ಹಾಲು ಪ್ರತಿನಿತ್ಯ ಬೆಂಗಳೂರಿಗೆ 2 ಲಕ್ಷ ಲೀಟರ್ ಹಾಲಿನ ಕೊರತೆಯುಂಟಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಾಮನ್ ಅಂತಾ ಅಂದುಕೊಂಡ್ರೇ ಇದು ಕಾರಣ ಬೇರೆಯೇ ಅಂತಿದೆ ಬಮೂಲ್. ಇನ್ನೊಂದಡೆ ನಂದಿನಿ ಬೂತ್‍ಗಳು ಸುಮಾರು ಮೂರುಸಾವಿರ ಲೀಟರ್ ಹಾಲು ಕೇಳಿದ್ರೆ ಪೂರೈಕೆಯಾಗ್ತಾ ಇರೋದು 1500 ಲೀಟರ್ ಅಂತೆ. ಮೊದಲೇ ಒಂದು ತಿಂಗಳ ಅಡ್ವಾನ್ಸ್ ಕೊಟ್ಟ ಗ್ರಾಹಕರು ಇದರಿಂದ ಕಿರಿಕಿರಿ ಮಾಡುತ್ತಿದ್ದಾರೆ. ಹೀಗಾಗಿ ನಿತ್ಯವೂ ಜನರೊಂದಿಗೆ ಗಲಾಟೆ ಮಾಡುವಂತಾಗಿದೆ ಅಂತಾ ಅಳಲು ತೋಡಿಕೊಂಡಿದ್ದಾರೆ.

ಹೋಟೆಲ್ ಮಾಲೀಕರು, ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿದೆ. ಸದ್ಯ ಬೆಂಗಳೂರಿಗೆ 15 ಲಕ್ಷ ಲೀಟರ್ ಹಾಲಿಗೆ ಡಿಮ್ಯಾಂಡ್ ಇದೆ. ಆದರೆ 13 ಲಕ್ಷ ಲೀಟರ್ ಹಾಲು ವಿತರಣೆಯಾಗ್ತಿದೆ ಅಂತಾ ಬಮೂಲ್ (BAMUL) ಸ್ಪಷ್ಟನೆ ಕೊಟ್ಟಿದ್ದು, ಹಾಲಿನ ಶಾರ್ಟೆಜ್‍ಗೆ ಕಾರಣವನ್ನು ಮುಂದಿಟ್ಟಿದ್ದಾರೆ. ಇದನ್ನೂ ಓದಿ; ಕಾರಿನಲ್ಲಿ ಫಾಲೋ ಮಾಡ್ತಾರೆ, ಟ್ರಕ್ ಹತ್ತಿಸಲು ಬರ್ತಾರೆ- ಶಾಸಕಿ ರೂಪಾಲಿ ನಾಯ್ಕ್‌ಗೆ ಜೀವ ಬೆದರಿಕೆ

ಹಾಲಿನ ಕೊರತೆಗೆ ಕಾರಣಗಳೇನು..?: ಶೇ.10ರಷ್ಟು ರೈತರು ಡೈರಿಗೆ ಹಾಲು ಹಾಕುತ್ತಿಲ್ಲ. ರೈತರಿಗೆ ಹಾಲಿನ ದರ ಏರಿಕೆ ಮಾಡಿಲ್ಲ. ಹೀಗಾಗಿ ಖಾಸಗಿಯವರು ಹೆಚ್ಚು ದರ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಹಸುವಿಗೆ ಹಾಕುವ ಹಿಂಡಿ, ಮೇವಿನ ದರ ಜಾಸ್ತಿ ಆದ್ರೆ ಹಾಲಿಗೆ ಕಡಿಮೆ ದುಡ್ಡು ನೀಡಲಾಗುತ್ತದೆ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆಯಿದೆ. ಇನ್ನು ನೆರೆ ರಾಜ್ಯಗಳಿಗೆ ಹಾಲು ವಿತರಣೆಯಾಗುತ್ತೆ. ವ್ಯಾಪಾರದ ಒಪ್ಪಂದ ಇರೋದ್ರಿಂದ ಏಕಾಏಕಿ ನಿಲ್ಲಿಸೋಕೆ ಆಗಲ್ಲ ಎಂಬ ಕಾರಣ ನೀಡಿದೆ.

ಈ ಸಮಸ್ಯೆ ನಿವಾರಿಸುವಂತೆ ಕೆಎಂಎಫ್‍ಗೆ ಬಮೂಲ್ ಪತ್ರ ಬರೆದಿದೆಯಂತೆ. ಹಾಲಿನ ವಿತರಣೆಗೆ ರೈತರಿಗೆ ಕೊಡುವ ದರ ಕಡಿಮೆಯಾಗಿದ್ದೇ ಕಾರಣವಾಗಿದ್ರೇ ಸರ್ಕಾರ ಇದನ್ನು ಬಗೆಹರಿಸಬೇಕು. ಇಲ್ಲದೇ ಇದ್ರೆ ಕರ್ನಾಟಕದ ಹೆಮ್ಮೆಯ ಗರಿಯಾಗಿರುವ ಕೆಎಂಎಫ್ ಅವನತಿಯತ್ತ ಹೆಜ್ಜೆ ಇಡೋದ್ರಲ್ಲಿ ಸಂಶಯವಿಲ್ಲ.

Comments

Leave a Reply

Your email address will not be published. Required fields are marked *