ಧರ್ಮಶಾಲಾದಲ್ಲಿ ದಲೈಲಾಮ ಭೇಟಿಯಾದ ನ್ಯಾನ್ಸಿ ಪೆಲೋಸಿ- ಕಣ್ಣು ಕೆಂಪಗಾಗಿಸಿದ ಚೀನಾ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕಾದ ಹಿರಿಯ ರಾಜಕಾರಣಿ ನ್ಯಾನ್ಸಿ ಪೆಲೋಸಿ (Nancy Pelosi) ನೇತೃತ್ವದ ನಿಯೋಗ ಧರ್ಮಶಾಲಾದಲ್ಲಿ ಟಿಬೆಟ್ ಮುಖ್ಯಸ್ಥ ದಲೈಲಾಮ (Dalai Lama) ಅವರನ್ನು ಭೇಟಿ ಮಾಡಿರೋದು ಚೀನಾದ (China) ಕಣ್ಣು ಕೆಂಪಗಾಗಿಸಿದೆ.

ಇತ್ತೀಚಿಗೆ ಅಮೆರಿಕ ಸಂಸತ್‌ನಲ್ಲಿ ದಿ ರಿಸಾಲ್ವ್ ಟಿಬೆಟ್ ಆಕ್ಟ್‌ಗೆ ಅನುಮೋದನೆ ನೀಡಲಾಗಿತ್ತು. ಇದರ ಪ್ರಕಾರ, ಟಿಬೆಟ್ (Tibet) ನಾಯಕರೊಂದಿಗೆ ಚೀನಾ ಚರ್ಚೆ ಆರಂಭಿಸಬೇಕು. ನೆಲದ ಸಂಸ್ಕೃತಿ ಕಾಪಾಡುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಬರಬೇಕು ಎಂದು ಅಮೆರಿಕ ಕೋರಲಿದೆ. ಅಲ್ಲದೇ ಟಿಬೆಟ್ ಇತಿಹಾಸ, ಜನರ ಬಗ್ಗೆ ಚೀನಾ ಹಬ್ಬಿಸುವ ಸುಳ್ಳು ಸುದ್ದಿಗಳ ತಡೆಗೆ ಅಮೆರಿಕ ವಿದೇಶಾಂಗ ಇಲಾಖೆ ಕೆಲಸ ಮಾಡಲಿದೆ. ಇದಕ್ಕಾಗಿ ದೇಣಿಗೆ ಸಂಗ್ರಹಿಸಲು ಅವಕಾಶ ಸಿಗಲಿದೆ. ಬೈಡನ್ ಸಹಿ ಹಾಕಿದ ನಂತರ ಈ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. ಆದರೆ ಇದು ಜಾರಿಗೆ ಬರದಂತೆ ಮಾಡಲು ಅಮೆರಿಕ ಮೇಲೆ ಚೀನಾ ಒತ್ತಡ ಹೇರುತ್ತಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸಲು ನಡ್ಡಾ ಸೂಚನೆ

ಇದೀಗ ಪೆಲೋಸಿ-ದಲೈಲಾಮ ಭೇಟಿಯನ್ನು ಚೀನಾ ತೀವ್ರವಾಗಿ ಖಂಡಿಸಿದೆ. ಈ ಹಿಂದೆ ಟಿಬೆಟ್ ವಿಚಾರದಲ್ಲಿ ಅಮೆರಿಕಗೆ ನೀಡಿದ ಭರವಸೆಗಳಿಗೆ ಕಟಿಬದ್ಧರಾಗಿದ್ದೇವೆ. ದಲೈಲಾಮ ಜೊತೆ ಸಂಪರ್ಕ ಬೇಡ. ಜಗತ್ತಿಗೆ ತಪ್ಪು ಸಂದೇಶ ತಲುಪಿಸೋದನ್ನು ನಿಲ್ಲಿಸಿ ಎಂದು ಗುಡುಗಿದೆ. ಟಿಬೆಟ್ ಎಂದೆಂದಿಗೂ ಚೀನಾಗೆ ಅವಿಭಾಜ್ಯ ಅಂಗ. ಇದನ್ನು ಉಳಿಸಿಕೊಳ್ಳಲು ಯಾವುದೇ ಕ್ರಮಕ್ಕೆ ಬೇಕಾದರೂ ಮುಂದಾಗುತ್ತೇವೆ ಎಂದು ಬೀಜಿಂಗ್ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ತೆಪ್ಪ ಮುಳುಗಿ ಮೂವರು ಪ್ರವಾಸಿಗರು ದುರ್ಮರಣ