ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಸ್ಪರ್ಧಿ ಸಮನ್ವಿ ಸಾವಿಗೆ ಲಾರಿ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಲಾರಿ ಚಾಲಕ ಮಂಚೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಸಮನ್ವಿ ಮೃತದೇಹ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದು, ಪರೀಕ್ಷೆಯ ಬಳಿಕ ಆಸ್ಪತ್ರೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರವಾಗಲಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವಿಗೆ ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಫೇಸ್‌ಬುಕ್‌ನಲ್ಲಿ ಕಂಬನಿ ಮಿಡಿದಿದ್ದಾರೆ. ಸುದ್ದಿ ಕೇಳಿದಾಗಿನಿಂದ ಮನಸ್ಸಿಗೆ ತೊಂದರೆಯಾಗುತ್ತಿದೆ. ಮಗುವನ್ನು ಕಳೆದುಕೊಂಡಿರುವ ತಾಯಿಯ ಬಗ್ಗೆ ಯೋಚಿಸಲೂ ಆಗುತ್ತಿಲ್ಲ. ಮಗುವನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಸಮನ್ವಿ ತುಂಬಾ ಪ್ರತಿಭಾವಂತೆ, ಮಾಡೆಲ್‌ ಥರಾನೆ ಇದ್ದಳು: ಪುಟಾಣಿ ನೆನೆದು ತಾರಾ ಕಂಬನಿ

ದುರ್ಘಟನೆ ಹೇಗಾಯಿತು?
ಕನಕಪುರ ರಸ್ತೆಯ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿರುವ ಅಮೃತ ನಾಯ್ಡು ಗುರುವಾರ ಸಂಜೆ ಹೋಂಡಾ ಆಕ್ಟಿವಾದಲ್ಲಿ ಮಗಳೊಂದಿಗೆ ಮನೆಯಿಂದ ಹೊರಗಡೆ ಹೊರಟಿದ್ದರು. ವಾಜರಹಳ್ಳಿ ಮೆಟ್ರೋ ಸ್ಟೇಶನ್ ಬಳಿ ಆಕ್ಟಿವಾ ಪಾರ್ಕ್ ಮಾಡಿ ಇಬ್ಬರೂ ಗಾಯತ್ರಿ ನಗರಕ್ಕೆ ಹೋಗಬೇಕಿತ್ತು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

ಮೆಟ್ರೋ ನಿಲ್ದಾಣಕ್ಕೆ 100 ಮೀ. ದೂರ ಇರುವಂತೆ ತಾಯಿ ಮಗಳು ಟಾಟಾ ಸುಮೋ ಹಾಗೂ ಲಾರಿ ಮಧ್ಯೆ ಸಿಲುಕಿದ್ದರು. ಟಿಪ್ಪರ್ ಲಾರಿ ಚಾಲಕ ಎಡಕ್ಕೆ ಗಾಡಿಯನ್ನು ತಿರುಗಿಸಿದ್ದಾನೆ. ಪರಿಣಾಮ ಎಡಭಾಗದ ಬಂಪರ್ ಡಿಕ್ಕಿ ಹೊಡೆದಿದ್ದರಿಂದ ಅಮೃತ ನಾಯ್ಡು ಮತ್ತು ಮನ್ವಿ ರಸ್ತೆಗೆ ಬಿದ್ದಿದ್ದಾರೆ. ಮಾನ್ವಿಯ ಸೊಂಟಕ್ಕೆ ಲಾರಿ ಬಂಪರ್ ಬಲವಾಗಿ ಗುದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಸಮನ್ವಿ ಮೃತಪಟ್ಟಿದ್ದಳು. ಕುಮಾರ ಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments

Leave a Reply

Your email address will not be published. Required fields are marked *