ಮೆಟ್ರೋ ದರ 100% ಏರಿಕೆಯಾದ ಕಡೆ 30% ದರ ಇಳಿಕೆ – ಮೂಗಿಗೆ ತುಪ್ಪ ಸವರಿದ BMRCL

– ಶುಕ್ರವಾರವೇ ಪರಿಷ್ಕೃತ ದರ ಜಾರಿ

ಬೆಂಗಳೂರು: ಜನಪರ ಕಾಳಜಿ ಹೊಂದಿರುವ ಪಬ್ಲಿಕ್ ಟಿವಿಯ ಮತ್ತೊಂದು ಸುದ್ದಿ ಇಂಪ್ಯಾಕ್ಟ್ ಆಗಿದೆ. ಬೆಂಗಳೂರು ಟ್ರಾಫಿಕ್‌ಗೆ ಪರ್ಯಾಯ ಪರಿಹಾರ ಎಂದು ಜನರ ಪ್ರೀತಿಗೆ ಪಾತ್ರವಾಗಿರುವ ಮೆಟ್ರೋ (Namma Metro) ಪ್ರಯಾಣ ದರವನ್ನು ಇಳಿಕೆ ಮಾಡುವುದಾಗಿ ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ (BMRCL) ತಿಳಿಸಿದೆ.

ಇತ್ತೀಚೆಗೆ ಹಲವು ಸ್ಟೇಷನ್‌ನಲ್ಲಿ 100% ಪ್ರಯಾಣ ದರವನ್ನು ಏರಿಸಿತ್ತು. ಇದರ ವಿರುದ್ಧ ಪಬ್ಲಿಕ್ ಟಿವಿ ನಿರಂತರ ವರದಿ ಮಾಡುವ ಮೂಲಕ ಜನರ ಭಾವನೆಗಳಿಗೆ ದನಿಯಾಗಿತ್ತು. ಜನಾಕ್ರೋಶದ ಜೊತೆಗೆ ಪಬ್ಲಿಕ್‌ ಟಿವಿ ಸೇರಿ ಮಾಧ್ಯಮಗಳ ಒತ್ತಾಯಕ್ಕೆ ಮಣಿದ ಸಿಎಂ ಸಿದ್ದರಾಮಯ್ಯ (CM Siddaramaiah) ದರ ಏರಿಕೆಯನ್ನು ಪರಿಷ್ಕರಿಸುವಂತೆ ಬಿಎಂಆರ್‌ಸಿಎಲ್ ಎಂಡಿಗೆ ಸೂಚನೆ ನೀಡಿದ್ದರು.

ಈ ಬೆನ್ನಲ್ಲೇ ಇಂದು ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ಸುದ್ದಿಗೋಷ್ಠಿ ನಡೆಸಿ, ನಮ್ಮ ಮೆಟ್ರೋ ನಿರ್ವಹಣೆಯ ವೆಚ್ಚ, ಸಾಲ, ಅದರ ಬಡ್ಡಿ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟು ದರ ಏರಿಕೆ ಮಾಡಲಾಗಿದೆ. ಆದರೆ ಕೆಲವು ಕಡೆ ದರವನ್ನು ಇಳಿಕೆ ಮಾಡಿ ಶುಕ್ರವಾರವೇ ಪರಿಷ್ಕೃತ ದರ ಜಾರಿ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ – ಮೊದಲು ಏನಿತ್ತು? ಈಗ ಏನು ಬದಲಾಗಿದೆ?

ದರ ಇಳಿಕೆ ಹೇಗೆ?
ನಮ್ಮ ಮೆಟ್ರೋ ಪ್ರಯಾಣ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲಾಗುತ್ತದೆ. ದರ 90% ರಿಂದ 100% ರವರೆಗೆ ಹೆಚ್ಚಳವಾಗಿರುವ ನಿಲ್ದಾಣಗಳ ಮಧ್ಯೆ ಇಳಿಕೆ ಮಾಡಲಾಗುವುದು.

100% ದರ ಏರಿಕೆಯಾಗಿದ್ರೇ ಅಲ್ಲಿ 30% ಮಾತ್ರ ಕಡಿತ ಮಾಡಲಾಗುತ್ತದೆ. ಕನಿಷ್ಟ 10 ರೂ. ಗರಿಷ್ಟ 90 ರೂ. ದರದಲ್ಲಿ ಯಾವ ಬದಲಾವಣೆಯೂ ಇಲ್ಲ.

ದುಪ್ಪಟ್ಟು ದರ ಏರಿಕೆಯಾಗಿರುವ ನಿಲ್ದಾಣಗಳಲ್ಲಿನ ದರವನ್ನು ಪರಿಷ್ಕರಿಸಲಾಗುವುದು. ದರ ಡಬಲ್ ಆಗಿರುವ ಕಡೆ ಯಾವ ಸ್ಟೇಜ್‌ಗಳ ನಡುವೆ ದರ ತುಂಬಾ ಹೆಚ್ಚಾಗಿದೆಯೋ ಆ ಸ್ಟೇಜ್‌ಗಳ ದರಗಳನ್ನು ಮರ್ಜ್ ಮಾಡಲಾಗುತ್ತದೆ. ಇದರಿಂದ ಕಡಿಮೆ ದೂರದಲ್ಲಿ ಪ್ರಯಾಣಿಸುವವರಿಗೆ ಕೊಂಚ ರಿಲೀಫ್ ಸಿಗಲಿದೆ.