ಲೋಕನಾಥ್-ಹ್ಯಾರಿಸ್ ಮಧ್ಯೆ ಸಂಧಾನ ಮಾಡಿಲ್ಲ, ವಿದ್ವತ್ ತಂದೆ ನನ್ನ ಸ್ನೇಹಿತರಷ್ಟೇ- ಡಿಕೆಶಿ

ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣದಲ್ಲಿ ನಲಪಾಡ್ ತಂದೆ ಶಾಸಕ ಹ್ಯಾರಿಸ್ ಹಾಗು ವಿದ್ವತ್ ತಂದೆ ಲೋಕನಾಥ್ ಮಧ್ಯೆ ನಾನು ಯಾವುದೇ ರೀತಿಯ ಸಂಧಾನ ಪ್ರಯತ್ನ ಮಾಡಿಲ್ಲ ಅಂತಾ ಇಂಧನ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕನಾಥ್ ಹಾಗೂ ಹ್ಯಾರಿಸ್ ಮಧ್ಯೆ ನಾನೇನು ಸಂಧಾನ ಮಾಡಿಲ್ಲ, ಅದರ ಅಗತ್ಯ ನನಗಿಲ್ಲ. ಲೋಕನಾಥ್ ನನ್ನ ಸ್ನೇಹಿತರಷ್ಟೆ, ತಪ್ಪು ಯಾರೇ ಮಾಡಿದ್ರೂ ತಪ್ಪೇ. ಹ್ಯಾರಿಸ್ ಕೂಡ ಈ ಬಗ್ಗೆ ಕ್ಷಮೆಯನ್ನು ಕೇಳಿದ್ದಾರೆ ಅಂತಾ ಹೇಳಿದ್ರು. ಇದನ್ನೂ ಓದಿ: ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ

ಸೀದಾ ರೂಪಯೇ ಸರ್ಕಾರ ಎಂಬ ಮೋದಿ ಟೀಕೆಗೆ ಇದೇ ವೇಳೆ ಡಿಕೆಶಿ ತಿರುಗೇಟು ನೀಡಿದ್ರು. ಪ್ರಧಾನಿ ಸ್ಥಾನದಲ್ಲಿರುವವರು ಏನು ಮಾತನಾಡಬೇಕು, ಮಾತನಾಡಬಾರದು ಎಂಬ ಸೂಕ್ಷ್ಮವನ್ನು ಆರಿಯಬೇಕು. ಮಾತನಾಡಬೇಕಾದರೆ ಜವಾಬ್ದಾರಿಯುತವಾಗಿ ಮಾತಡಬೇಕು ಅಂದ್ರು. ಇದನ್ನೂ ಓದಿ:ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

ಚಿದಂಬರಂ ಪುತ್ರ ಕಾರ್ತಿ ಚಿದಂಬರಂನನ್ನು ಬಂಧನಕ್ಕೆ ಒಳಪಡಿಸಿರುವುದು ರಾಜಕೀಯ ಪ್ರೇರಿತ. ಇದರಲ್ಲಿ ಯಾವುದೇ ರೀತಿಯ ಆನುಮಾನವೇ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದ್ರು. ಇದನ್ನೂ ಓದಿ:  ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

Comments

Leave a Reply

Your email address will not be published. Required fields are marked *