ಉಡುಪಿಯಲ್ಲಿ ಟ್ರಾಫಿಕ್ ನಿಯಮ ಮುರಿದ ನಳೀನ್- ಸುನೀಲ್

ಉಡುಪಿ: ಜನಸಾಮಾನ್ಯರಿಗೊಂದು ನ್ಯಾಯ ನಮ್ಮನ್ನಾಳುವ ನಾಯಕರಿಗೊಂದು ನ್ಯಾಯ ಎನ್ನುವ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಪೊಲೀಸರು ಹೊಸ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪೊಲೀಸರು ಜಾರಿಗೆ ತಂದಿದ್ದಾರೆ. ಆದರೆ ಉಡುಪಿಯಲ್ಲಿ ಬಿಜೆಪಿ ನಾಯಕರಿಗೆ ಪೊಲೀಸರು ದಂಡ ಬೀಸಲೇ ಇಲ್ಲ.

ರಾಜ್ಯಾದ್ಯಂತ ಮಧ್ಯಮ ವರ್ಗವನ್ನು ಗುರಿಯಾಗಿಸಿ ಪೊಲೀಸರು ದಂಡ ಬೀಸುತ್ತಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಉಡುಪಿಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಉಡುಪಿಗೆ ಬರುತ್ತಾ ನಳೀನ್ ಅವರು ಸೀಟ್ ಬೆಲ್ಟ್ ಹಾಕಿರಲಿಲ್ಲ. ಸೀಟ್ ಬೆಲ್ಟ್ ಹಾಕದೆಯೇ ನಳೀನ್  ಕುಮಾರ್  ಮಂಗಳೂರಿನಿಂದ ಉಡುಪಿಗೆ ಪ್ರಯಾಣಿಸಿದ್ದಾರೆ.

ಸರ್ಕಾರದ ಮುಖ್ಯ ಸಚೇತಕ ಶಾಸಕ ಸುನೀಲ್ ಕುಮಾರ್ ಅವರು ಕೂಡ ನಿಯಮ ಉಲ್ಲಂಘಿಸಿದ್ದಾರೆ. ಇವರಿಬ್ಬರೂ ಕಣ್ಮುಂದೆಯೇ ಕಾರಿಂದ ಇಳಿದರೂ ಟ್ರಾಫಿಕ್ ಪೊಲೀಸರು ದಂಡ ಹಾಕಿಲ್ಲ. ಅಷ್ಟೇ ಅಲ್ಲದೆ ಉಡುಪಿಯ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.

ಈ ಜೀಪಿನ ಚಾಲಕ ಸೀಟ್ ಬೆಲ್ಟ್ ಹಾಕದೆ ಮೂರ್ನಾಲ್ಕು ಕಿ.ಮೀ ವಾಹನ ಚಲಾಯಿಸಿದ್ದಾನೆ. ನಗರದಾದ್ಯಂತ ತೆರೆದ ವಾಹನ ಸಂಚರಿಸುವಾಗ ಪೊಲೀಸರು ಜೀಪಿಗೆ ರಕ್ಷಣೆ ನೀಡಿದರೆ  ವಿನಾಃ ಆ ಚಾಲಕನಿಗೆ ದಂಡ ಹಾಕಲಿಲ್ಲ.

Comments

Leave a Reply

Your email address will not be published. Required fields are marked *