ಸಿದ್ದರಾಮಯ್ಯನವರೇ ಒಬ್ಬ ದೊಡ್ಡ ಭಯೋತ್ಪಾದಕ: ಕಟೀಲ್

-ಕಾಂಗ್ರೆಸ್ ಈಗ ಮುಳುಗಿದ ಹಡಗು, ಕಾಂಗ್ರೆಸ್‍ನ ಹತ್ತಾರು ಜನ ಬಿಜೆಪಿ ಸೇರಲು ಸಿದ್ಧತೆ ಮಾಡಿದ್ದಾರೆ

ಮಂಗಳೂರು: ಆರ್‌ಎಸ್‌ಎಸ್ ತಾಲಿಬಾನ್ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯರೇ ಒಬ್ಬ ದೊಡ್ಡ ಭಯೋತ್ಪಾದಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಅತಂತ್ರ ಸ್ಥಿತಿಯಲ್ಲಿ ಇಂಥ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ತಾಲಿಬಾನ್ ಸಂಸ್ಕೃತಿ ಕಾಂಗ್ರೆಸ್ ನವರದ್ದಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ರಾಜ್ಯದಲ್ಲಿ 24ಕ್ಕೂ ಅಧಿಕ ಹಿಂದೂಗಳ ಹತ್ಯೆಗಳು ಆಗಿವೆ. ಅದಕ್ಕೆ ಹೇಳೋದು ಅವರದ್ದು ತಾಲಿಬಾನ್ ಸಂಸ್ಕೃತಿ, ಅವರೇ ಭಯೋತ್ಪಾದಕ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ಮಾನ ಮಾರ್ಯಾದೆ ಇಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ: ರಮೇಶ್ ಕುಮಾರ್

nalin kumar kateel

ಕೊಲೆ, ಸುಲಿಗೆ, ಗೋಹತ್ಯೆ ಅವರ ಕಾಲದಲ್ಲೇ ಹೆಚ್ಚು ನಡೆದಿರುವಾಗ ಅವರಿಗೆ ಈ ಬಗ್ಗೆ ಮಾತನಾಡಲು ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ. ಇನ್ನು ಮುಂದಿನ ಉಪ ಚುನಾವಣೆ ಬಗ್ಗೆ ಮಾತನಾಡಿದ ನಳಿನ್ ಕಾಂಗ್ರೆಸ್ ಈಗ ಮುಳುಗಿದ ಹಡಗು, ಹೀಗಾಗಿ ಕಾಂಗ್ರೆಸ್‍ನ ಹತ್ತಾರು ಜನ ಬಿಜೆಪಿ ಸೇರಲು ಸಿದ್ದತೆ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಸೇರಲು ಬರುವ ಹಲವರು ನನ್ನ ಸಂಪರ್ಕದಲ್ಲೂ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಿಶ್ವಾಸ ಜನರಿಗಿಲ್ಲ. ಕಾಂಗ್ರೆಸ್‍ನ ಹತ್ತಾರು ಶಾಸಕರ ಸಹಿತ ಕೆಲ ಪ್ರಮುಖರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎನ್ನುವ ಮೂಲಕ ಕೈ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *