ಬಾಲಕಿಯ ಅತ್ಯಾಚಾರವೆಸಗಿ ಹತ್ಯೆ – ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್

ಮುಂಬೈ: 2019ರಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ವ್ಯಕ್ತಿಗೆ ನಾಗ್ಪುರ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಸಂಜಯ್ ಪುರಿ (32) ಎಂಬಾತನ ವಿರುದ್ಧ ಆರೋಪ ರುಜುವಾತಾಗಿದೆ. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಆರ್ ಪಡವಾಲ್ ಅವರಿದ್ದ ಪೀಠ, ಐಪಿಸಿ ಸೆಕ್ಷನ್ 302 (ಕೊಲೆ) ಐಪಿಸಿ ಸೆಕ್ಷನ್ 376(ಎ) (ಬಿ) (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಸೆಕ್ಷನ್ 6ರ ಅಡಿಯಲ್ಲಿ ಅಪರಾಧಿಗೆ ಮರಣದಂಡನೆ ವಿಧಿಸಿ ಆದೇಶಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ- ಶೋಭಾ ಕರಂದ್ಲಾಜೆಗೆ ಬಿಗ್ ರಿಲೀಫ್

ಬಾಲಕಿ ಕಲ್ಮೇಶ್ವರ ತಾಲೂಕಿನ ಲಿಂಗ ಗ್ರಾಮದ ಜಮೀನಿನಲ್ಲಿ ಕಾರ್ಮಿಕರಾಗಿದ್ದ ತನ್ನ ಪೋಷಕರೊಂದಿಗೆ ವಾಸವಾಗಿದ್ದಳು. ಅವಳ ಮೃತದೇಹ 2019 ಡಿಸೆಂಬರ್ 6 ರಂದು ತಲೆಗೆ ತೀವ್ರವಾದ ಗಾಯಗಳಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಟ್ಟೆಯ ತುಂಡು ಮತ್ತು ರಾಡ್‍ನ್ನು ಆಕೆಯ ಬಾಯಿಕೆ ಹಾಕಲಾಗಿತ್ತು. ತನಿಖೆ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈಯಲಾಗಿದೆ ಎಂದು ತಿಳಿದು ಬಂದಿತ್ತು.

ಪ್ರಕರಣದಲ್ಲಿ ಒಟ್ಟು 26 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಬಳಿಕ ಅಪರಾಧಿಯ ಕೃತ್ಯ ಬಯಲಾಗಿದ್ದು, ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – ಬ್ರಹ್ಮೋಸ್ ಏರೋಸ್ಪೇಸ್‍ನ ಮಾಜಿ ಇಂಜಿನಿಯರ್‌ಗೆ ಜೀವಾವಧಿ ಶಿಕ್ಷೆ