ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಮಾಡಿಸಿದ್ದ ವಿಶೇಷ ಆಹ್ವಾನ ಪತ್ರಿಕೆ ಮಾದರಿಯಲ್ಲಿ ನಾಗಮಂಗಲ ಮಾಜಿ ಶಾಸಕ ಎಲ್ ಆರ್ ಶಿವರಾಮೇಗೌಡ ಅವರು ತಮ್ಮ ಮಗಳ ಮದುವೆಗೆ ವಿಡಿಯೋ ಹಾಡೊಂದನ್ನು ಮಾಡಿಸಿದ್ದಾರೆ.
ಡಿಸೆಂಬರ್ ತಿಂಗಳು 6 ರಂದು ಶಿವರಾಮೇಗೌಡರ ಪುತ್ರಿ ಭವ್ಯ ಮತ್ತು ರಾಜೀವ್ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಹಾಡಿನ ರೂಪದಲ್ಲಿ ಶಿವರಾಮೇಗೌಡರು ವಿಶೇಷ ವಿವಾಹ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಿದ್ದಾರೆ.
ಹಾಡು, ಡ್ಯಾನ್ಸ್, ಗೀತೆ ಸಂಯೋಜನೆ ಹೊಂದಿಗೆ ವಿಶೇಷ ಡಿಜಿಟಲೈಜ್ಡ್ ಚಿತ್ರೀಕರಣ ಮಾಡಲಾಗಿದೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಶಿವರಾಮೇಗೌಡರ ಕುಟುಂಬ ಸದಸ್ಯರು ಕಾಣಿಸಿಕೊಂಡಿದ್ದು, ಮದುವೆಗೆ ವಿಶೇಷ ಆಹ್ವಾನ ಕೋರಿದ್ದಾರೆ.
https://www.youtube.com/watch?v=DFbodv3fXdw
















Leave a Reply