ಹನಿಟ್ರ್ಯಾಪ್‌ ಕುರಿತು ಸಿಬಿಐ ಅಥವಾ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಲಿ: ಎನ್.ರವಿಕುಮಾರ್

– ಹನಿಟ್ರ‍್ಯಾಪ್‌ಗೆ ಕೊಲೆ ಸಂಚಿನ ನಂಟು ಆರೋಪ

ಬೆಂಗಳೂರು: ಹನಿಟ್ರ‍್ಯಾಪ್ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಇದರ ಸಮಗ್ರ ತನಿಖೆಗೆ ಸಿಬಿಐ ಅಥವಾ ನ್ಯಾಯಾಂಗ ತನಿಖೆ ಆಗಲಿ ಎಂದು ಪರಿಷತ್ ಸದಸ್ಯ ಎನ್.ರವಿಕುಮಾರ್ (N RAvikumar) ಆಗ್ರಹಿಸಿದರು.

ಬೆಂಗಳೂರಿನಲ್ಲಿ (Bengaluru) ಮಾತಾಡಿದ ಅವರು, ಹನಿಟ್ರ‍್ಯಾಪ್ ಬದಲು ಕೊಲೆ ಮಾಡಲು ಬಂದಿದ್ದರು ಎಂದು ಪರಿಷತ್ ಸದಸ್ಯ ರಾಜೇಂದ್ರ (Rajendra) ಆರೋಪಿಸಿದ್ದರು. ಈ ಹನಿಟ್ರ‍್ಯಾಪ್ ಹಿಂದೆ ಯಾರ್ಯಾರಿದ್ದಾರೆ? ಯಾರ್ಯಾರನ್ನು ಬಲಿ ತೆಗೆದುಕೊಳ್ಳುವ ವಿಚಾರ ಇದೆ ಎಂಬುದು ಬಹಿರಂಗ ಆಗಬೇಕಿದೆ. ರಾಜಣ್ಣ (Rajanna) ಇರಬಹುದು, ಅವರ ಮಗ ರಾಜೇಂದ್ರರ ಕೊಲೆ ಯತ್ನದ ಹೇಳಿಕೆ ಏನಿದೆಯೋ ಅದು ಗಂಭೀರ ವಿಚಾರ ಎಂದು ಹೇಳಿದರು.

ಸರ್ಕಾರ ಕೂಡಲೇ ರಾಜೇಂದ್ರ ಅವರಿಗೆ ಭದ್ರತೆ ಒದಗಿಸಬೇಕು. ಸರ್ಕಾರದ ಒಳಗೆ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿ, ಕಾಂಗ್ರೆಸ್ಸಿನ ಒಳಗೇ ಈ ಸ್ಥಿತಿ ಬಂದರೆ, ಬೇರೆ ಪಕ್ಷದ ನಾಯಕರ ಪರಿಸ್ಥಿತಿ ಏನು ಎಂಬುದನ್ನು ಕೂಡ ನಾವು ಗಂಭೀರವಾಗಿ ಯೋಚಿಸಬೇಕಿದೆ. ಹನಿಟ್ರ‍್ಯಾಪ್ (Hanitrap) ವಿಚಾರವನ್ನು ಸಿಬಿಐ ಅಥವಾ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ರವಿಕುಮಾರ್ ಆಗ್ರಹಿಸಿದರು. ಇದನ್ನೂ ಓದಿ: ನನ್ನ ಹತ್ಯೆಗೆ ಸುಪಾರಿ – ಹೊಸ ಬಾಂಬ್‌ ಸಿಡಿಸಿದ ಸಚಿವ ರಾಜಣ್ಣ ಪುತ್ರ

ನಾವು ಒಳಮೀಸಲಾತಿಯಡಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಕೊಟ್ಟಿದ್ದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ನಿಗದಿಪಡಿಸಿದರೆ ಅದರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಾಲಿನ ಬೆಲೆ 9 ರೂ. ಏರಿಕೆ – ಗ್ಯಾರಂಟಿ ಉಚಿತ, ಬೆಲೆ ಏರಿಕೆ ಖಚಿತ ಎಂದ ಸುರೇಶ್‌ ಕುಮಾರ್‌

ನ್ಯಾ.ನಾಗಮೋಹನ್ ದಾಸ್ (Nagamohan Das) ಅವರು ನೀಡಿದ ವರದಿಯನ್ನು ಗಮನಿಸಿ ನಾವು ನಿರ್ಧಾರ ಮಾಡುತ್ತೇವೆ. ಪಕ್ಷವು ಬುಧವಾರ ಕೈಗೊಂಡ ತೀರ್ಮಾನದಂತೆ ಪಕ್ಷದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.