ಅಡುಗೆ ಮನೆಯಿಂದ ಹಿಮಾಲಯದವರೆಗೆ – ಮೈನಸ್ 5 ಡಿಗ್ರಿಯಲ್ಲಿ ಗೃಹಿಣಿಯರ ಪರ್ವತಾರೋಹಣ

ಮೈಸೂರಿನ ದಿಟ್ಟ ನಾರಿಯರು ಇಂದಿನ ಪಬ್ಲಿಕ್ ಹೀರೋಗಳು

ಮೈಸೂರು: ಹಿಮಾಲಯ ವಿಶ್ವದ ಅತಿ ಎತ್ತರದ ಪರ್ವತ ಪ್ರದೇಶ ಇದನ್ನ ಏರೋಕೆ ಯುವಕ, ಯುವತಿಯರೂ ಸಹ ಕಷ್ಟ ಪಡುತ್ತಾರೆ. ಆದರೆ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಸುಮಾರು 14,500 ಅಡಿಗಳಷ್ಟು ಎತ್ತರದ ಹಿಮಾಲಯದ ಬರಾಟ್ ಸರ್‍ಪಾಸ್‍ನಲ್ಲಿ ನಗರದ ಮಹಿಳೆಯರು ತ್ರಿವರ್ಣಧ್ವಜ ಹಾರಿಸಿ ಬಂದಿದ್ದಾರೆ.

ಹಿಮಾಲಯವನ್ನ ಏರೋದು ಕಷ್ಟಸಾಧ್ಯ. ವಿಶ್ವದ ಅತಿ ಎತ್ತರದ ಪರ್ವತವನ್ನು ಮೈಸೂರಿನ ಮಹಿಳೆಯರು ಏರಿ, ತ್ರಿವರ್ಣ ಧ್ವಜವನ್ನ ಹಾರಿಸಿದ್ದಾರೆ. ಈ ಚಾರಣದಲ್ಲಿ ಗೃಹಿಣಿಯರೇ ಹೆಚ್ಚಾಗಿ ಇದ್ದದ್ದು ವಿಶೇಷವಾಗಿತ್ತು. 13 ವರ್ಷದ ವಯೋಮಾನದಿಂದ 65 ವರ್ಷದ 27 ಮಹಿಳೆಯರು 15 ದಿನದ ಚಾರಣವನ್ನ ಮೈನಸ್ 5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ 8 ದಿನಗಳ ಕಾಲ ಯಶಸ್ವಿಯಾಗಿ ಮುಗಿಸಿದ್ದಾರೆ. ನಿರ್ಮಲ ಮಠಪತಿ, ಸುಮಾ ಮಹೇಶ್, ಚಾಂದಿನಿ ಕುಶಾಲಪ್ಪ ಸೇರಿದಂತೆ 14 ಗೃಹಿಣಿಯರು ಹಿಮಾಲಯ ಪರ್ವತ ಏರಿ ಬಂದಿದ್ದಾರೆ.

ಈ ಸಾಹಸದಲ್ಲಿ ಒಟ್ಟು 14 ಗೃಹಿಣಿಯರು ಭಾಗವಹಿಸಿ, ನಾವು ಕೇವಲ ಅಡುಗೆ ಮನೆಗೆ ಸೀಮಿತ ಅಲ್ಲ ಇಂತಹ ಸಾಹಸವನ್ನೂ ಮಾಡುತ್ತೇವೆ ಎಂದು ತೋರಿಸಿ ಕೊಟ್ಟಿದ್ದಾರೆ.

ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್ ನೇತೃತ್ವದಲ್ಲಿ ಮಹಿಳೆಯರು ಈ ಸಾಹಸ ಮಾಡಿದ್ದರು. ಪರ್ವತ ಏರಿ ಇಳಿಯಲು 8 ದಿನ ಆಗಿದೆ. ಇವರು ಮೇ ತಿಂಗಳಲ್ಲಿ ಹೋಗಿದ್ದು, ಮೂರು ದಿನಗಳ ಹಿಂದೆ ಪ್ರವಾಸ ಮುಗಿಸಿ ಹಿಂದಿರುಗಿ ಬಂದಿದ್ದಾರೆ.

ಮಹಿಳೆಯರಿಗೆ ಹೃಷಿಕೇಶದ ಅಲಕನಂದಾ ನದಿ ಬಳಿ ಅಲ್ಲಿನ ಹವಾಮಾನಕ್ಕೆ ಒಗ್ಗುವಂತೆ ತರಬೇತಿ ನೀಡಿದ್ದು, ಬಳಿಕ ಡೆಹ್ರಾಡೂನ್ ತಲುಪಿ ಅಲ್ಲಿಂದ ಸಂಕ್ರಿ ಬೇಸ್ ಕ್ಯಾಂಪ್‍ನಲ್ಲಿ ಚಳಿಗೆ ದೇಹ ಒಗ್ಗಿಸಿಕೊಳ್ಳಲು ತರಬೇತಿ ಪಡೆದುಕೊಂಡಿದ್ದರು. ಇವರಿಗೆ ತರಬೇತಿ ಕೊಟ್ಟಿರೋದು ಟೈಗರ್ ಅಡ್ವೆಂಚರ್ ಫೌಂಡೇಶನ್.

https://www.youtube.com/watch?v=2ghlz5HtzdE

Comments

Leave a Reply

Your email address will not be published. Required fields are marked *