ಸಾಂದರ್ಭಿಕ ಚಿತ್ರ
ಮೈಸೂರು: ಹುಲಿ ದಾಳಿಗೆ ಜಿಲ್ಲೆಯ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ತಿಮ್ಮನಹೊಸಳ್ಳಿ ಹಾಡಿಯಲ್ಲಿ ಘಟನೆ ನಡೆದಿದೆ.
ರೈತ ಅಪ್ಪು ಅಲಿಯಾಸ್ ಕಡ್ಡಿ (60) ಮೃತ ದುರ್ದೈವಿ. ರೈತ ಅಪ್ಪು ಮೇಕೆ ಮೇಯಿಸುತ್ತಿದ್ದಾಗ ಹಠಾತ್ ದಾಳಿ ಮಾಡಿದ ಹುಲಿ, ಅವರನ್ನು ಅರಣ್ಯಕ್ಕೆ ಎತ್ತಿಕೊಂಡು ಹೋಗಿ ಸಾಯಿಸಿದೆ. ಇದನ್ನು ನೋಡಿದ ಮತ್ತೊಬ್ಬ ಕುರಿ ಮೇಯಿಸುತ್ತಿದ್ದ ವ್ಯಕ್ತಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು, ಪರಿಶೀಲನೆ ನಡೆಸಿದಾಗ ಅರಣ್ಯ ಪ್ರದೇಶದ ಒಳಗೆ ಮೃತ ದೇಹ ಪತ್ತೆಯಾಗಿದೆ.
ಭೀವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಹುಲಿ ದಾಳಿಗೆ ಒಟ್ಟು ಮೂವರು ಮೃತಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply