ಪರೀಕ್ಷೆ ಪೇ ಚರ್ಚೆಯಲ್ಲಿ ಭಾಗವಹಿಸಿ ಥ್ರಿಲ್ ಆದ ಮೈಸೂರು ವಿದ್ಯಾರ್ಥಿನಿ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವದೆಹಲಿಯಲ್ಲಿ ನಡೆಸಿದ ಪರೀಕ್ಷೆ ಪೇ ಚರ್ಚಾ ಸಂವಾದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚರ್ಚೆಯಲ್ಲಿ ಭಾಗವಹಿಸಿದ್ದ ಮೈಸೂರಿನ ವಿದ್ಯಾರ್ಥಿ ಸಖತ್ ಥ್ರಿಲ್ ಆಗಿದ್ದಾರೆ.

ಮೈಸೂರಿನ ರಾಘವೇಂದ್ರ ನಗರದ ನಿವಾಸಿ ಸುರೇಶ್ ಅವರ ಮಗಳು ಚೇತನಾ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಚೇತನಾ ಜೆಎಸ್‍ಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದಿಂದ ಒಟ್ಟು 30 ವಿದ್ಯಾರ್ಥಿಗಳನ್ನು ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಆಯ್ಕೆ ಮಾಡಲಾಗಿತ್ತು.

ಮೈಸೂರು ಜಿಲ್ಲೆಯಿಂದ ಇಬ್ಬರು ಆಯ್ಕೆಯಾಗಿದ್ದರು ಅದರಲ್ಲಿ ಚೇತನಾ ಕೂಡ ಒಬ್ಬರು. ಸಂವಾದದಲ್ಲಿ ಭಾಗವಹಿಸಿ ಬಂದ ನಂತರ ಚೇತಾನಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ. ಚೆನ್ನಾಗಿ ಓದಿದರೂ ಪರೀಕ್ಷೆ ಎಂದರೆ ಭಯ ಪಡುತ್ತಿದ್ದೆ ಈಗ ಟೆನ್ಸನ್ ಫ್ರೀ ಆಗಿದ್ದೇನೆ ಎಂದು ಚೇತನಾ ಹೇಳಿದ್ದಾರೆ.

ಪರೀಕ್ಷಾ ಪೇ ಚರ್ಚಾ ಸಂವಾದವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಕೇವಲ ಪ್ರಧಾನಿಗಳ ಮಾತು ಮಾತ್ರವಲ್ಲ ಅಲ್ಲಿ ಸೇರಿದ್ದ ವಿದ್ಯಾರ್ಥಿಗಳ ಜೊತೆಯೂ ವಿಚಾರ ವಿನಿಮಯ ಮಾಡಿಕೊಳ್ಳಲು ಇದು ಉತ್ತಮ ವೇದಿಕೆಯಾಗಿತ್ತು ಎಂದು ಚೇತನಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮೋದಿಯವರ ಪರೀಕ್ಷೆ ಪೇ ಚರ್ಚಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ವಿಸುವಲ್ಲಿ ಯಶಸ್ವಿಯಾಗಿದೆ. ಇದನ್ನು ಓದಿ: ಪರೀಕ್ಷೆ ಜೀವನದಲ್ಲಿ ಮಹತ್ವ, ಆದರೆ ಇದು ಜೀವನದ ಪರೀಕ್ಷೆಯಲ್ಲ – ಬೇರೆ ಮಕ್ಕಳ ಜೊತೆ ಹೋಲಿಸಬೇಡಿ: ಪೋಷಕರಿಗೆ ಮೋದಿ ಸಲಹೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *