ಮೈಸೂರು: ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಸಾಮಾಜಿಕ ಜಾಲತಾಣದಲ್ಲಿ ರಸಪ್ರಶ್ನೆ ಕೇಳುವ ಮೂಲಕ ಟಾಂಗ್ ನೀಡಲು ಆರಂಭಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ವಿನಯ್ ಕುಲರ್ಣಿ ಹಾಗೂ ಮೈಸೂರು ಎಸ್‍ಪಿ ರವಿ ಡಿ.ಚನ್ನಣ್ಣವರ್ ವಿರುದ್ಧ ಹಲವು ಪೋಸ್ಟ್ ಮಾಡಿ ಪ್ರಶ್ನೆ ಕೇಳುತ್ತಿದ್ದಾರೆ.
ಸಿಂಹ ಪ್ರಶ್ನೆಗಳು:
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಕಪಾಳಕ್ಕೆ ಹೊಡೆದ ಪುಂಡ ಯಾರು? ಬಳ್ಳಾರಿ ನಗರ ಪಾಲಿಕೆ ಅಧಿಕಾರಿಯ ಕಪಾಳಕ್ಕೆ ಹೊಡೆದವರ ವಿರುದ್ಧ ಕೇಸು ದಾಖಲಾಗಿದೇಯೋ ಇಲ್ವೋ? ಓಬವ್ವನಿಗೆ ಹಿಂದಿನಿಂದ ಚೂರಿ ಹಾಕಿದವನ ಜಯಂತಿ ಆರಂಭಿಸಿದ ಸರ್ಕಾರ ಯಾವುದು? ಮೈಸೂರಿನ ಕೆ.ಆರ್.ನಗರದಲ್ಲಿ ಅಂಟಿಸಿರುವ ಪೋಸ್ಟರ್ ಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಇಲ್ಲವೆ? ಎಂಬ ಪ್ರಶ್ನೆಗಳನ್ನು ಟ್ಟಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಕೇಳಿದ್ದಾರೆ.
ಮಂಗಳವಾರದಿಂದ ಸಾಮಾಜಿಕ ಜಾಲತಾಣದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಬಳಕೆದಾರರು ತಮಗೆ ತೊಚಿದಂತೆ ಉತ್ತರಗಳನ್ನು ನೀಡುತ್ತಿದ್ದಾರೆ.
ಹೀಗೊಂದು ರಸಪ್ರಶ್ನೆ: ಒನಕೆ ಓಬವ್ವನಿಗೆ ಹಿಂದಿನಿಂದ ಚೂರಿ ಹಾಕಿ ಸಾಯಿಸಿದ ಹೇಡಿಯ ಕುಲಪುತ್ರನ ಜಯಂತಿ ಆಚರಣೆ ಆರಂಭಿಸಿದ ಸರ್ಕಾರ ಮತ್ತು ಪಕ್ಷ ಯಾವುದು?
— Prathap Simha (@mepratap) December 6, 2017
ಹೀಗೊಂದು ಪ್ರಶ್ನೆ: ಮೈಸೂರು ಜಿಲ್ಲೆಯ ಕೆ.ಆರ್. ನಗರದ ಬೀದಿ ಬೀದಿಗಳಲ್ಲಿ ಈ ರೀತಿ ಪೋಸ್ಟರ್ ಅಂಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರೂ ಇಲ್ಲವೇ? ಈದ್, ಟಿಪ್ಪು ಮೆರವಣಿಗೆಯಂತೆ ಇಂಥ ಪೋಸ್ಟರ್ಗಳಿಗೂ ಅವಕಾಶವಿದೆಯೇ? ಸಿದ್ದರಾಮಯ್ಯನವರ ಆಡಳಿತದಲ್ಲಿ ಮೈಸೂರು ಜಿಲ್ಲೆಯಲ್ಲಿ ಏನಾಗುತ್ತಿದೆ ನೋಡಿ?! pic.twitter.com/tmuxG4XynU
— Prathap Simha (@mepratap) December 6, 2017
ಹೀಗೊಂದು ರಸಪ್ರಶ್ನೆ: 2007ರಲ್ಲಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆದ ಶೂಟೌಟ್ನಲ್ಲಿ ಮುಖ್ಯ ಆರೋಪಿಯಾಗಿದ್ದವನ ಸಹೋದರ ಹಾಗು ವೈದ್ಯರಿಗೆ ಕಪಾಳಕ್ಕೆ ಹೊಡೆದಿದ್ದಲ್ಲದೆ ಜಿಲ್ಲಾಪಂಚಾಯತ್ ಸದಸ್ಯರೊಬ್ಬರ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆ ಎದುರಿಸುತ್ತಿರುವ ಪುಂಡ ಯಾರು?!
— Prathap Simha (@mepratap) December 5, 2017




#RanaHediBlockTimma
ಹೀಗೊಂದು ರಸಪ್ರಶ್ನೆ: ವಿಶ್ವ ಕಂಡ ರಾಷ್ಟ್ರ ಪಿತಾಮಹ ಗಾಂಧಿಯನ್ನ ಗುಂಡಿಕ್ಕಿಕೊಂದ ಗೂಡ್ಸೆಯನ್ನು ಆರಾಧಿಸುವ ವಿಕೃತ ಮನಸ್ಥಿತಿಯ ಮತಾಂಧ ವಿಚಾರಾಧಾರೆಯುಳ್ಳ ಏಕೈಕ ಪಕ್ಷ ಬಿಜೆಪಿ ಅಲ್ಲದೆ ಮತ್ತೆ ಯಾವುದಾದರೂ ಇದೆಯೇ? pic.twitter.com/jXhWUBXPxk— gopal krishna (@gopal_krishna19) December 6, 2017




Leave a Reply