ಸುಳ್ವಾಡಿ ದುರಂತದ ಎ1 ಆರೋಪಿಗೆ ಬೇಲ್ ಕೊಡಿಸಲು ಮುಂದಾದ ವಕೀಲ

ಮೈಸೂರು: ಸುಳ್ವಾಡಿ ಮಾರಮ್ಮ ಪ್ರಸಾದದಲ್ಲಿ ವಿಷ ಬೆರೆಸಿ 17 ಜನರ ಸಾವಿಗೆ ಕಾರಣವಾದ ಪ್ರಮುಖ ಆರೋಪಿ ಇಮ್ಮಡಿ ಮಹದೇವ ಸ್ವಾಮೀಜಿಗೆ ಬೇಲ್ ಕೊಡಿಸಲು ಮೈಸೂರು ಮೂಲದ ವಕೀಲರು ಮುಂದಾಗಿದ್ದಾರೆ.

ಸುಳ್ವಾಡಿ ಮಾರಮ್ಮ ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ವಕಾಲತ್ತು ವಹಿಸದೇ ಇರಲು ಚಾಮರಾಜನಗರ ಜಿಲ್ಲಾ ವಕೀಲರ ಸಂಘ ತೀರ್ಮಾನಿಸಿದ್ದಾರೆ. ಹೀಗಾಗಿ ಇಮ್ಮಡಿ ಮಹದೇವ ಸ್ವಾಮೀಜಿಗೆ ಬೇಲ್ ಕೊಡಿಸಲು ಮೈಸೂರು ಮೂಲದ ವಕೀಲ ಮಹದೇವಪ್ರಸಾದ್ ಅವರು ಕೊಳ್ಳೇಗಾಲ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಬೇಲ್‍ಗೆ ಅರ್ಜಿ ಸಲ್ಲಿಸಿದ್ದಷ್ಟೇ ಅಲ್ಲದೆ ಸ್ವಾಮೀಜಿ ಪರವಾಗಿ ವಕಲಾತನ್ನು ನಾನೇ ವಹಿಸುತ್ತೇನೆ. ನನಗೆ ಅವಕಾಶ ನೀಡಬೇಕೆಂದು ವಕೀಲ ಮಹದೇವಪ್ರಸಾದ್ ಕೊಳ್ಳೇಗಾಲ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ.

ಆರೋಪಿಗಳು ಮೈಸೂರಿನ ಕಾರಾಗೃಹದಲ್ಲಿದ್ದು, ಜನವರಿ 3ರಂದು ಕೊಳ್ಳೇಗಾಲ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಈ ನಿಟ್ಟಿನಲ್ಲಿ ಇಮ್ಮಡಿ ಸ್ವಾಮೀಜಿಗೆ ಮಾತ್ರ ಬೇಲ್ ಕೊಡಿಸಲು ಆತನ ಸಂಬಂಧಿಕರು ಹಾಗೂ ಆಪ್ತರು ಮುಂದಾಗಿದ್ದಾರೆ ಎನ್ನಲಾಗಿದೆ.

ಇಮ್ಮಡಿ ಮಹದೇವಸ್ವಾಮೀಜಿಗೆ ಸಾಲೂರು ಮಠದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಸ್ವಾಮೀಜಿಯ ಆಪ್ತ ಪೊನ್ನಾಜಿ ಮಹದೇವಸ್ವಾಮಿಯೇ ಬೇಲ್ ಕೊಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊನ್ನಾಚಿ ಮಹದೇವಸ್ವಾಮಿ ನಾನು ಆ ಕೆಲಸಕ್ಕೆ ಮುಂದಾಗುವುದಿಲ್ಲ. ಅಲ್ಲದೇ ಸಾಲೂರು ಮಠವೂ ಕೂಡ ಇಮ್ಮಡಿ ಮಹದೇವ ಸ್ವಾಮೀಜಿಗೆ ಬೇಲ್ ಕೊಡಿಸುವ ಗೋಜಿಗೆ ಹೋಗಲ್ಲ. ಅವರಿಗೆ ಅವರ ಸಂಭಂಧಿಕರು ಬೇಲ್ ಕೊಡಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *