ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ

ರಾಯಚೂರು: ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್‍ರೇಪ್ ಸಂಬಂಧಿಸಿದಂತೆ ಕ್ಯಾನ್ಸರ್ ರೋಗ ನಾಲ್ಕನೇ ಹಂತ ತಲುಪಿದಾಗ ಏನಾಗುತ್ತದೆಯೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಅವದೂತ ವಿನಯ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಖಂಡನೀಯವಾಗಿದೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣದ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕಿದೆ. ಪಕ್ಷ ಭೇದವಿಲ್ಲದೆ ಕಾನೂನನ್ನು ಬಿಗಿಗೊಳಿಸುವ ಕೆಲಸ ಆಗಬೇಕು. ಅಹಿಂಸಾವಾದಿಯಾದ ನಾನು ಎಲ್ಲವನ್ನೂ ಹೇಳಲಾಗುವುದಿಲ್ಲ. ಆದರೆ ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

ಅತ್ಯಾಚಾರಿಗಳಿಗೆ, ಹೈದರಾಬಾದ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಕ್ರಮದಂತೆ ಇಲ್ಲಿಯೂ ಮಾಡಲಿ. ಕ್ಯಾನ್ಸರ್ ರೋಗ ನಾಲ್ಕನೇ ಹಂತ ತಲುಪಿದಾಗ ಏನಾಗುತ್ತದಯೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಎನ್ನುವ ಮೂಲಕ ಪರೋಕ್ಷವಾಗಿ ಶೂಟ್ ಮಾಡಿ ಎಂದರು. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

ಪ್ರಪಂಚದ ಎಲ್ಲ ದೇಶಗಳು ಒಂದಾದರೆ ತಾಲಿಬಾನ್ ಉಗ್ರರನ್ನು ಮಟ್ಟ ಹಾಕಬಹುದು. ತಾಲಿಬಾನ್ ಮೇಲೆ ದಾಳಿ ಮಾಡಿರುವ ಉಗ್ರರು ಪ್ರಾಯೋಗಿಕವಾಗಿ ಅಘ್ಘಾನ್ ದೇಶವನ್ನು ಬಳಸಿಕೊಂಡಿದ್ದಾರೆ. ಚೀನಾ ಮತ್ತು ಪಾಕಿಸ್ತಾನ, ಭಾರತದ ಮೇಲೆ ದಾಳಿ ಮಾಡುವ ಸಂಚಿನಲ್ಲಿವೆ ಎಂದು ವಿನಯ್ ಗುರೂಜಿ ಅಭಿಪ್ರಾಯಪಟ್ಟರು.

Comments

Leave a Reply

Your email address will not be published. Required fields are marked *