ಮೈಸೂರು: ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸುತ್ತಾ ರದ್ಧಾಂತ ಸೃಷ್ಟಿಸಿದ ಲಾರಿ ಚಾಲಕನನ್ನು ಗ್ರಾಮಸ್ಥರು ಚೇಸಿಂಗ್ ಮಾಡಿ ಹಿಡಿದು ಗೂಸಾ ನೀಡಿರುವ ಘಟನೆ ಮೈಸೂರಿನ ನಂಜನಗೂಡು ರಸ್ತೆಯಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಲಾರಿ ಚಾಲಕ ಹಾಗೂ ಕ್ಲೀನರ್ ಈ ಅವಾಂತರ ಮಾಡಿದ್ದಾರೆ. ಮೈಸೂರಿನ ನಂಜನಗೂಡು ರಸ್ತೆಯಲ್ಲಿ ದಾರಿಯುದ್ದಕ್ಕೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ರಾದ್ಧಾಂತ ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ.

ಇವರನ್ನು ನಂಜನಗೂಡು ರಸ್ತೆಯಲ್ಲಿನ ಕಡಕೊಳ ಗ್ರಾಮದ ಟಿವಿಎಸ್ ಕಾರ್ಖಾನೆ ಬಳಿ ಹಿಡಿಯಲಾಗಿದೆ. ಸಿಕ್ಕಿಬಿದ್ದ ಡ್ರೈವರ್ ಮತ್ತು ಕ್ಲೀನರ್ ಗೆ ಸಾರ್ವಜನಿಕರು ಸಖತ್ ಗೂಸಾ ನೀಡಿದ್ದಾರೆ. ಪಾನಮತ್ತರಾಗಿದ್ದ ಇಬ್ಬರನ್ನ ಪೊಲೀಸರ ವಶಕ್ಕೆ ನೀಡಲಾಗಿದೆ.

ಸುಮಾರು 10 ಕಿ.ಮೀ ವರೆಗೂ ಅಡ್ಡಾದಿಡ್ಡಿ ಲಾರಿ ಓಡಿಸಿದ ಚಾಲಕ, ಅಡ್ಡ ಬಂದ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದ್ದಾನೆ. ಲಾರಿ ಅಡ್ಡಗಟ್ಟಲು ಯತ್ನಿಸಿದವರ ಮೇಲೆ ಕೂಡ ದರ್ಪ ತೋರಿದ್ದಾನೆ.
https://www.youtube.com/watch?v=5Rr6V-OQ7aM












Leave a Reply