ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ- ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ

ಮೈಸೂರು: ವಿಶ್ವ ವಿಖ್ಯಾತ ದಸರಾ (Mysuru Dasara 2022) ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಗಜ ಪಡೆಯ ಕ್ಯಾಪ್ಟನ್ ಅಭಿಮನ್ಯು (Abhimanyu) ಕೂಡ ಅಂಬಾರಿ ಹೊರಲು ಫಿಟ್ ಆಗಿ ಸಿದ್ಧನಾಗಿದ್ದಾನೆ.

ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಸಾಗಲು ಗಜಪಡೆ ಸಿದ್ಧವಾಗಿದೆ. ಅರಮನೆ (Mysuru Palace) ಗೆ ಆಗಮಿಸಿದ್ದ ಗಜ ತಂಡದಲ್ಲಿ ಜಂಬೂ ಸವಾರಿಯಲ್ಲಿ ಭಾಗಿಯಾಗುತ್ತಿರೋದು 9 ಆನೆಗಳು ಮಾತ್ರ. ಈ ಬಾರಿ ಜಾನಪದ ತಂಡ, ಸ್ತಬ್ಧ ಚಿತ್ರಗಳು ಹೆಚ್ಚು ಇರುವ ಕಾರಣ ಮೆರವಣಿಗೆಯಲ್ಲಿ ಹೆಚ್ಚು ಆನೆಗಳು (Elephant) ಭಾಗಿಯಾಗಲು ಕಷ್ಟವಾಗುವ ಹಿನ್ನೆಲೆ 9 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಜಂಬೂ ಸವಾರಿ ಆನೆಗಳು:
* ಕ್ಯಾಪ್ಟನ್ – ಅಭಿಮನ್ಯು
* ನಿಶಾನೆ ಆನೆ – ಅರ್ಜುನ
* ನೌಫತ್ ಆನೆ- ಗೋಪಿ
* ಕುಮ್ಕಿ ಆನೆಗಳು – ಕಾವೇರಿ ಮತ್ತು ಚೈತ್ರ
* ಧನಂಜಯ, ಮಹೇಂದ್ರ
* ಭೀಮ, ಗೋಪಾಲಸ್ವಾಮಿ ಆನೆಗಳು ಭಾಗಿ ಆಗಲಿವೆ. ಗಜಪಡೆ ಯಶಸ್ವಿಯಾಗಿ ಜಂಬೂ ಸವಾರಿ ಮುಗಿಸುವ ಬಗ್ಗೆ ಡಿಸಿಎಫ್ ಕರಿಕಾಳನ್ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

ಜಂಬೂ ಸವಾರಿ ಪ್ರಮುಖ ಆಕರ್ಷಣೆ ಕ್ಯಾಪ್ಟನ್ ಕೂಲ್ ಅಭಿಮನ್ಯು ಮೂರನೇ ಬಾರಿಗೆ ಅಂಬಾರಿ ಹೊರಲಿದ್ದಾನೆ. ಜಂಬೂ ಸವಾರಿ ವೇಳೆ ಆನೆಗಳ ಆರೋಗ್ಯ ಸುರಕ್ಷತೆ ದೃಷ್ಠಿಯಿಂದ ನಾಲ್ಕು ವೈದ್ಯರ ತಂಡಗಳ ನಿಯೋಜಿಸಲಾಗಿದೆ. ರಾಜ ಮಾರ್ಗದಲ್ಲಿ ಜಂಬೂ ಸವಾರಿ ಹಾದು ಹೋಗುವ ಸರ್ಕಲ್‍ಗಳಾದ ಕೆ.ಆರ್ ಸರ್ಕಲ್, ಆರ್.ಎಂ.ಸಿ ಸರ್ಕಲ್ ಹಾಗೂ ಹೈವೆ ಸರ್ಕಲ್ ಗಳಲ್ಲಿ ವೈದ್ಯರ ತಂಡ ಇರಲಿದೆ. ಮತ್ತೊಂದು ತಂಡ ಗಜಪಡೆ ಜೊತೆಯಲ್ಲೆ ಹೆಜ್ಜೆ ಹಾಕಲಿದೆ. ಬೆಳಗ್ಗೆ 9 ಗಂಟೆ ವೇಳೆಗೆ ಎಲ್ಲಾ ತಂಡಗಳು ನಿಗದಿತ ಸರ್ಕಲ್‍ಗಳಲ್ಲಿ ನಿಯೋಜನೆ ಗೊಳ್ಳಲಿವೆ.

ಒಟ್ಟಾರೆ ಇದೇ ಮೊದಲ ಬಾರಿಗೆ ದೀಪಾಲಂಕಾರಗಳ ನಡುವೆ ಜಂಬೂ ಸವಾರಿ ಸಾಗಲಿದ್ದು, ವಿದ್ಯುತ್ ದೀಪಾಲಂಕಾರಗಳ ನಡುವೆ ಅಭಿಮನ್ಯುವಿನ ಗಾಂಭೀರ್ಯದ ಹೆಜ್ಜೆ ಹಾಕುತ್ತಾ ಹೇಗೆ ನಾಡದೇವತೆಯನ್ನು ಮೆರವಣಿಗೆ ಮಾಡ್ತಾನೆ ಅನ್ನೋದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *