ಮೈಸೂರು: ದಸರಾಗೆ ಕೇಂದ್ರ ವಿಮಾನಯಾನ ಇಲಾಖೆಯಿಂದ ಗಿಫ್ಟ್ ಸಿಕ್ಕಿದೆ. ಸೆಪ್ಟೆಂಬರ್ 15 ರಿಂದ ಮೈಸೂರು ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭವಾಗಲಿದೆ.
ಹಲವು ತಿಂಗಳಿಂದ ನಿಷ್ಕ್ರಿಯಗೊಂಡಿದ್ದ ಮೈಸೂರಿನ ವಿಮಾನ ನಿಲ್ದಾಣವೂ ಸೆಪ್ಟೆಂಬರ್ 15 ರಿಂದ ಮೈಸೂರು-ಚೆನ್ನೈ ನಡುವೆ ವಿಮಾನ ಹಾರಾಟ ಆರಂಭವಾಗುವ ಮೂಲಕ ಮತ್ತೆ ನಿಲ್ದಾಣ ಕಾರ್ಯೋನ್ಮುಖವಾಗಲಿದೆ.
ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ವಿಮಾನ ಸೇವೆ ಆರಂಭವಾಗುತ್ತಿದ್ದು ಮುಂದಿನ ಮೂರು ವರ್ಷಗಳ ಕಾಲ ವಿಮಾನ ಹಾರಾಟ ನಡೆಯಲಿದೆ. ಸಂಜೆ ವೇಳೆಯಲ್ಲಿ ಚೆನ್ನೈನಿಂದ ಮೈಸೂರಿಗೆ ಆಗಮಿಸಿ ಮತ್ತೆ ಮೈಸೂರಿನಿಂದ ಚೆನ್ನೈಗೆ ಹಾರಾಟ ನಡೆಸಲಿದೆ.
ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ನೇರ ಹಾರಾಟ ನಡೆಯಲಿದೆ. ವಿಮಾನ ಹಾರಾಟ ವಿಷಯವನ್ನು ಸಂಸದ ಪ್ರತಾಪ್ ಸಿಂಹ ಖಚಿತಪಡಿಸಿದ್ದು ತಮ್ಮ ಟ್ವಿಟರ್ನಲ್ಲಿ ವಿಮಾನಯಾನ ಸಚಿವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
Mysuru-Chennai flight service starts from Sept 15th! Thank you very much @jayantsinha ji and our beloved PM @narendramodi ji n thank u all pic.twitter.com/2QJKZFSanP
— Prathap Simha (@mepratap) September 1, 2017
Mysuru-Chennai flight service starts from Sept 15th! Thank you all. pic.twitter.com/u8iis0NK4k
— Prathap Simha (@mepratap) September 1, 2017

Leave a Reply