ರತನ್ ಟಾಟಾ ನಿಧನಕ್ಕೆ ನಿತ್ಯಾ ಮೆನನ್ ಭಾವುಕ ಪೋಸ್ಟ್‌

ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ (Ratan Tata) ನಿನ್ನೆ (ಅ.10) ತಡರಾತ್ರಿ ನಿಧನರಾಗಿದ್ದಾರೆ. ಅತ್ಯಂತ ಸರಳವಾಗಿ ಬದುಕಿ ಬಾಳಿದ ರತನ್ ಟಾಟಾ ನಿಧನಕ್ಕೆ ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ಸಂತಾಪ ಸೂಚಿಸಿದ್ದಾರೆ. ಅವರ ಕುರಿತು ಸುದೀರ್ಘವಾಗಿ ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್‌ ಶೆಟ್ಟಿ

ನಿಮಗೆ ವಿದಾಯ ಹೇಳಬೇಕಾಗಿ ಬರುವ ದಿನದ ಬಗ್ಗೆ ನಾನು ಯೋಚಿಸಿದ್ದೆ. ನಿಮ್ಮಂತಹ ವ್ಯಕ್ತಿ ನೀವೇ ಕೊನೆ ಎಂದಾಗ ದುಃಖವಾಗುತ್ತದೆ. ನಿಮ್ಮಂತಹ ಪುರುಷರು ಮತ್ತೆ ಬರಲಿದ್ದಾರಾ ಎನ್ನುವುದು ನನಗೆ ಗೊತ್ತಿಲ್ಲ. ಮೊದಲ ಬಾರಿಗೆ ನನಗೆ ನಿಜವಾಗಿಯೂ ನಷ್ಟದ ಅನುಭವಾಗುತ್ತಿದೆ ಎಂದಿದ್ದಾರೆ ನಿತ್ಯಾ. ನಿಮ್ಮ ಅಗಲಿಕೆ ಎಷ್ಟೋ ವಿಚಾರಗಳ ಅಗಲಿಕೆ ಎಂದು ಅನಿಸುತ್ತಿದೆ. ಇಂದಿನ ದಿನದಲ್ಲಿ ಕಾಣಲು ಸಿಗದಂತಹ ಹಲವಾರು ಸಂಗತಿಗಳಿವೆ ನಿಮ್ಮಲ್ಲಿವೆ. ಉದಾತ್ತ, ದಯೆ, ರಾಜ, ಸಹಾನುಭೂತಿ, ಮಾನವೀಯತೆ ಇದೆಲ್ಲವೂ ನಿಮ್ಮ ಅಗಲಿಕೆಯಿಂದ ಅಗಲಿದಂತಾಗುತ್ತಿದೆ. ಅದೆಷ್ಟೋ ಜನರಿಗೆ ಒಳ್ಳೆಯ ಉದಾಹರಣೆಯಾಗುವಂತೆ ನೀವು ಬದುಕಿದ್ದೀರಿ. ಒಳ್ಳೆಯತನ ಮತ್ತು ಯಶಸ್ಸಿನ ಕುರಿತು ಹಲವು ವಿಚಾರಗಳು ನನಗೆ ನೆನಪಿಸುತ್ತದೆ ಎಂದಿದ್ದಾರೆ ನಟಿ.

 

View this post on Instagram

 

A post shared by Nithya Menen (@nithyamenen)

ನಿಮ್ಮ ಬಗ್ಗೆ ಏನೇ ಹೇಳಿದರೂ ಅದು ಕಡಿಮೆಯೇ. ನಾನು ಬದುಕಿರುವಾಗಲೇ ನೀವು ಇಲ್ಲಿ ಬದುಕಿದ್ದಕ್ಕೆ ಧನ್ಯವಾದಗಳು. ನನಗೆ ಭರವಸೆ ಹಾಗೂ ನನಗಾಗಿ ಮತ್ತು ಇತರರಿಗಾಗಿ ನಾನು ಏನು ಬಯಸಬೇಕು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾಗಳು ಎಂದಿದ್ದಾರೆ ನಟಿ. ‘ಗುಡ್ ಬೈ ಡಿಯರ್ ರತನ್ ಟಾಟಾ’ ಎಂದು ನಟಿ ಭಾವುಕವಾಗಿ ಬರೆದುಕೊಂಡಿದ್ದಾರೆ.