ತುಮಕೂರು: ನನ್ನ ಪತ್ನಿ ಅಪಾರ ದೈವ ಭಕ್ತೆ. ದಿನಾಲೂ ದೇವರ ಪೂಜೆ ಮಾಡ್ತಾಳೆ. ಆ ಪೂಜೆಯ ಫಲವಾಗಿಯೇ ನನಗೆ ಎಲ್ಲಾ ಸ್ಥಾನ ಮಾನ ಸಿಕ್ಕಿದ್ದೆ ಅನ್ನುತ್ತಾಳೆ. ಅದು ನಿಜವೋ ಸುಳ್ಳೋ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಚಾಲನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರ್ತಾಳೆ. ಹಾಗಾಗಿಯೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನವ ಜೋಡಿಗಳಿಗೆ ಕಿವಿಮಾತು ಹೇಳಿದ್ರು.

ರಾಜಕಾರಣಿಗಳು, ದೊಡ್ಡ-ದೊಡ್ಡ ಶ್ರೀಮಂತರು ಅರಮನೆಯಲ್ಲಿ ಮದುವೆ ಮಾಡಿಕೊಳ್ತಾರೆ. ಆದ್ರೆ ನಾನು ನನ್ನ ಸಹೋದನ ಮಕ್ಕಳ ಮದುವೆಯನ್ನು ಸರಳವಾಗಿ ಹಳ್ಳಿಯಲ್ಲೆ ಮಾಡಿದ್ದೇನೆ. ಹೆಚ್ಚಿನದಾಗಿ ಯಾರಿಗೂ ಆಮಂತ್ರಣವನ್ನೂ ನೀಡಿಲ್ಲ ಎಂದು ತಮ್ಮ ಸರಳತೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬಹಿರಂಗವಾಗಿ ಪತ್ನಿ ಮೇಲೆ ಪ್ರೀತಿ ತೋರಿಸಿದ ಸಿಎಂ!
ಮಾಜಿ ಪ್ರಧಾನಿಗಳೇ ನನ್ನ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಹೀಗಿರುವಾಗ ಬಿಜೆಪಿಯವರು ನಮ್ಮ ಎಲ್ಲಾ ಒಳ್ಳೆಯ ಕೆಲಸದಲ್ಲೂ ಹುಳುಕು ಹುಡುಕುತ್ತಾರೆ. ಅಲ್ಲದೆ ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೆ ಸತ್ಯ ಎಂದು ಹೇಳುವ ಮೂಲಕ ಅತಿಯಾದ ಆತ್ಮವಿಶ್ವಾಸ ತೋರಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ @siddaramaiah ಅವರು ಭಾಗವಹಿಸಿ, ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಜೋಡಿಗಳಿಗೆ ಶುಭ ಹಾರೈಸಿದರು. pic.twitter.com/coDQERjBmS
— CM of Karnataka (@CMofKarnataka) December 10, 2017
ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಮುಖ್ಯಮಂತ್ರಿ @siddaramaiah ಅವರು ನೆರವೇರಿಸಿದರು. pic.twitter.com/jtPTrMQkMb
— CM of Karnataka (@CMofKarnataka) December 10, 2017




Leave a Reply