`ನನ್ನ ಕಿಡ್ನಿ ಮಾರಾಟಕ್ಕಿದೆ, ಹಣ ನೀಡಿ ಖರೀದಿಸಿ’ – ಟೀ ಅಂಗಡಿ ಮುಂದೆ ಯುವಕನ ಫಲಕ

ಮಂಡ್ಯ: ಸಾಲದಿಂದ ಬೇಸತ್ತಿರುವ ಮಂಡ್ಯ ನಗರದ ವ್ಯಕ್ತಿಯೊಬ್ಬರು ನನ್ನ ಕಿಡ್ನಿ ಸೇಲ್‍ಗಿದೆ ಎಂದು ಟೀ ಅಂಗಡಿ ಮುಂದೆ ಫಲಕ ಹಾಕಿದ್ದಾರೆ.

ವಿನೋದ್ ಕುಮಾರ್(26) ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ ಮಧುರ ಟೀ ಸ್ಟಾಲ್ ಅಂಗಡಿ ಇಟ್ಟುಕೊಂಡಿದ್ದಾರೆ. ಮಂಡ್ಯ ಸಮೀಪದ ತಗ್ಗಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ವಿನೋದ್ ಕುಮಾರ್ ಮನೆ ಕಟ್ಟಿಸುವುದು ಸೇರಿದಂತೆ ಹಲವಾರು ಕಾರಣಗಳಿಗೆ ಸಾಲ ಮಾಡಿಕೊಂಡಿದ್ದಾನೆ.

ತಾನು ಮಾಡಿಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟಲೂ ಕಷ್ಟವಾಗಿದೆ. ಹಣ ಕೊಟ್ಟವರಿಗೆ ಹಣ ವಾಪಸ್ ಕೊಡುವುದು ನ್ಯಾಯ. ಹೀಗಾಗಿ ನಮ್ಮ ಜಮೀನನ್ನು ಅಡವಿಟ್ಟು ಸಾಲ ತೀರಿಸೋಣ ಅಂತಿದ್ದೇನೆ. ಆದರೆ ನಾಡ ಕಚೇರಿಯಲ್ಲಿ ಜಮೀನಿನ ಸ್ಕೆಚ್ ಕೊಡಲು ಲಂಚ ಕೇಳುತ್ತಿದ್ದಾರೆ. ಲಂಚ ಕೊಡಲು ನನ್ನ ಬಳಿ ಹಣವಿಲ್ಲ. ಹೀಗಾಗಿ ನಾನು ನನ್ನ ಕಿಡ್ನಿ ಸೇಲ್ ಮಾಡುತ್ತೇನೆ. ಯಾರಾದ್ರು ಕಿಡ್ನಿ ಬೇಕಾದವರು ನನಗೆ ಹಣ ನೀಡಿ ಕಿಡ್ನಿ ಕೊಂಡುಕೊಳ್ಳಿ ಎಂದು ವಿನೋದ್ ಕುಮಾರ್ ತನ್ನ ಟೀ ಅಂಗಡಿ ಮುಂದೆ ಬರೆದು ಅಂಟಿಸಿದ್ದಾರೆ.

ವಿನೋದ್ ಕುಮಾರ್ ಕಿಡ್ನಿ ಮಾರಾಟಕ್ಕಿದೆ ಎಂದು ಬರೆದು ಅಂಟಿಸಿರುವುದನ್ನು ನೋಡಿದ ಸ್ಥಳೀಯರು, ಈ ರೀತಿ ಮಾಡುವುದು ತಪ್ಪು ಎಂದು ಬುದ್ದಿ ಹೇಳಿದ್ದಾರೆ. ಆದರೆ ಯಾರ ಬುದ್ಧಿ ಮಾತಿಗೂ ಕಿವಿಗೊಡದ ವಿನೋದ್ ಕುಮಾರ್, ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಹೀಗಾಗಿ ಕಿಡ್ನಿ ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *