ದೊಡ್ಮಗನೆ ಫೇವರೇಟ್ ಅಂತಿದೆ ನಮ್ ಅಜ್ಜಿ: ಭಾವುಕ ವೀಡಿಯೋ ಪೋಸ್ಟ್ ಮಾಡಿದ ಕ್ರೇಜಿಸ್ಟಾರ್ ಪುತ್ರ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ತಮ್ಮ ಇನ್ ಸ್ಟಾ ಪೇಜ್ ನಲ್ಲಿ ಭಾವುಕ ವೀಡಿಯೋವೊಂದನ್ನು ಹಾಕಿದ್ದಾರೆ. ತಮ್ಮ ಅಜ್ಜಿ ಪಟ್ಟಮ್ಮಾಳ್ (ಅಪ್ಪನ ತಾಯಿ) ಇರುವ ಆ ವೀಡಿಯೋದಲ್ಲಿಯ ಒಂದು ಅಚ್ಚರಿಯ ಸಂಗತಿಯನ್ನೂ ಅವರು ಬಿಚ್ಚಿಟ್ಟಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ನಿಧನರಾಗಿರುವ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್, ಊಟ ಮಾಡುವ ಸನ್ನಿವೇಶದಲ್ಲಿ ನಿನ್ನ ಫೇವರೇಟ್ ಯಾರು ಅಂತ ಪ್ರಶ್ನೆಯೊಂದು ಕೇಳಿ ಬರುತ್ತದೆ. ಒಂದು ಕ್ಷಣವೂ ಯೋಚಿಸದ ಆ ತಾಯಿ ದೊಡ್ಮಗನೇ ನನ್ನ ಫೇವರೇಟ್ ಅಂತಾರೆ. ಪಟ್ಟಮ್ಮಾಳ್ ಅವರಿಗೆ ಇಬ್ಬರು ಮಕ್ಕಳು ಹಿರಿಯ ಮಗ ರವಿಚಂದ್ರನ್, ಎರಡನೇ ಮಗ ಬಾಲಾಜಿ. ಈ ಇಬ್ಬರು ಮಕ್ಕಳಲ್ಲಿ ಹಿರಿಯ ಮಗನೆ ಫೇವರೇಟ್ ಎಂದು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ನವೀನ್ ವ್ಯಕ್ತಿತ್ವ ಪ್ರಶಂಸಿಸಿದ ಚಂದನವನದ ಮೋಹಕತಾರೆ

ರವಿಚಂದ್ರನ್ ಅವರಿಗೆ ಮಾತ್ರವಲ್ಲ, ಮೊಮ್ಮಗ ಮನೋರಂಜನ್ ಮೇಲೆಯೂ ಅವರಿಗೆ ಸಾಕಷ್ಟು ಅಕ್ಕರೆಯಂತೆ. ಹಾಗಾಗಿ ಅಜ್ಜಿಯೊಂದಗಿನ ಭಾವನಾತ್ಮಕ ಕ್ಷಣಗಳನ್ನು ಮನೋರಂಜನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಕೊನೆ ಉಸಿರು ಎಳೆಯುವತನಕ ಇಡೀ ಕುಟುಂಬವನ್ನು ಒಟ್ಟಾಗಿ ಇಟ್ಟವರು. ಅತೀ ಮುಖ್ಯವಾಗಿ ನನ್ನ ಅಪ್ಪನ ಜೊತೆ ಅವರಿಗೆ ಇದ್ದ ಬಾಂಧವ್ಯ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನನ್ನ ಅಜ್ಜಿ ಈ ವೀಡಿಯೋದಲ್ಲೂ ನನ್ನ ದೊಡ್ಡ ಮಗನೇ ನನ್ನ ಫೇವರೇಟ್ ಅಂತಿದ್ದಾರೆ. ಅಂದು, ಇಂದು, ಎಂದೆಂದೂ ನೀವೇ ನನ್ನ ಶಕ್ತಿ. ಅಮ್ಮ ಓಂ ಶಾಂತಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.Ravichandran's son Manoranjan, who is breaking news about marriage » Jsnewstimes

ಪಟ್ಟಮ್ಮಾಳ್ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಹಲವು ವರ್ಷಗಳಿಂದ ರವಿಚಂದ್ರನ್ ಅಮ್ಮನ ಆರೈಕೆಯಲ್ಲಿದ್ದರು. ತನ್ನ ತಾಯಿ ಜೊತೆಗಿನ ಸಂಬAಧ ಕುರಿತು ಮಾತನಾಡುವಾಗ ರವಿಚಂದ್ರನ್ ತಮ್ಮ ತಾಯಿಯನ್ನು ಬಹಳ ಅಚ್ಚುಕೊಂಡಿದ್ದರು. ಸಂದರ್ಶನವೊದರಲ್ಲಿ ಮಾತನಾಡುವಾಗ ತಾಯಿ ಬಗ್ಗೆ ಮಾತನಾಡಿದ್ದ ಅವರು, ನನ್ನ ತಾಯಿ ಕೊಮಾದಲ್ಲಿ ಇದ್ದಾಗಲೂ ಅಮ್ಮಾ ಎಂದ ತಕ್ಷಣ ನನ್ನತ್ತ ನೋಡುತ್ತಿದ್ದರು ಎಂದು ಭಾವುಕರಾಗಿದ್ದರು. ಇದನ್ನೂ ಓದಿ: ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

ಮನೋರಂಜನ್ ಅವರು ‘ಸಾಹೇಬ’ ಸಿನಿಮಾ ಮೂಲಕ ಚಂದನವನವನ್ನು ಪ್ರವೇಶಿಸಿದ್ದರು. ಇತ್ತೀಚೆಗೆ ರಿಲೀಸ್ ಆದ ‘ಮುಗಿಲ್ ಪೇಟೆ’ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಚಂದನವನದ ಭರವಸೆಯ ನಟ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Comments

Leave a Reply

Your email address will not be published. Required fields are marked *