– ಮಹಾಘಟಬಂಧನ್ ಭಾಗವಾಗಿರುತ್ತೇನೆ
ಬೆಂಗಳೂರು: ಬೆಂಗಳೂರು ಸೆಂಟ್ರಲ್ ನನಗೆ ಮಿನಿ ಇಂಡಿಯಾ. ಹೀಗಾಗಿ ನಾನು ಅಲ್ಲಿಂದಲೇ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಬಹುಭಾಷಾ ಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಎರಡು ಮೂರು ತಿಂಗಳಿನಿಂದ ಚಿಂತಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಹುಟ್ಟಿದ್ದು ಮಾರ್ಥಾಸ್ ಆಸ್ಪತ್ರೆಯಲ್ಲಿ, ನಾನು ಚಾಮರಾಜ ಪೇಟೆ, ಶಾಂತಿನಗರದಲ್ಲಿದ್ದೆ. ಇಲ್ಲಿ ನನ್ನ ಸಾಕಷ್ಟು ಬಂಧುಗಳಿದ್ದಾರೆ ಎಂದು ಹೇಳಿದರು.

ಜನರಿಗಾಗಿ ಕಾನೂನುಗಳನ್ನು ರೂಪಿಸುವಾಗ ಅವರ ಧ್ವನಿಯಾಗಲು ನಿರ್ಧರಿಸಿದ್ದೇನೆ. ಕಳೆದ ಆರು ತಿಂಗಳಲ್ಲಿ ನಮ್ಮ ಜಸ್ಟ್ ಆಸ್ಕಿಂಗ್‍ನಿಂದ ಅನೇಕ ಪ್ರಶ್ನೆಗಳನ್ನು ಮಾಡಿದ್ದೇವೆ. ಇದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಲೋಕಸಭೆಯಲ್ಲಿ ನಮ್ಮ ಸಂಸದರು ಜನರ ಧ್ವನಿಯಾಗುತ್ತಿಲ್ಲ. ಗೆದ್ದ ನಂತರ ಯಾರದ್ದೋ ಗುಲಾಮರಾಗುತ್ತಾರೆ. ಆದ್ದರಿಂದ ನಾನು ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.
ಮಹಾಘಟಬಂಧನ್ ವಿಚಾರವಾಗಿ ಮಾತನಾಡಿದ ಪ್ರಕಾಶ್ ರಾಜ್ ಅವರು, ಕೋಮುವಾದವನ್ನು ಎದುರಿಸಲು ಶಕ್ತಿಗಳಿಗೆ ನಾನು ಕೈ ಜೋಡಿಸುತ್ತೇನೆ ಎಂದು ಹೇಳುವ ಮೂಲಕ ಮಹಾಘಟಬಂಧನ್‍ಗೆ ಭಾಗವಾಗಿರುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply