ನಾನ್‍ವೆಜ್ ಪ್ರಿಯರಿಗೆ ಶಾಕ್ – 700ರ ಗಡಿದಾಟಿದ ಮಟನ್ ರೇಟ್

ಬೆಂಗಳೂರು: ನಾನ್‍ವೆಜ್ ಖಾದ್ಯಪ್ರಿಯರಿಗೆ ಶಾಕ್, ಇನ್ಮುಂದೆ ಮಟನ್ ಐಟಮ್ಸ್ ತಿನ್ನೋ ಮುನ್ನ ಜೇಬು ಗಟ್ಟಿಯಿದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ. ಯಾಕೆಂದರೆ ಮಟನ್ ರೇಟ್ ಏರಿಕೆಯಾಗಿದೆ.

ಹೌದು.ಕಳೆದ ವಾರ ಕೆಜಿ ಮಟನ್‍ಗೆ 550 ರೂ. ಇತ್ತು. ಆದರೀಗ ಕೆಜಿ ಮಟನ್‍ಗೆ 700 ರೂಪಾಯಿಯಾಗಿದೆ. ಕಳೆದ ಬಾರಿ ಉಂಟಾದ ಪ್ರವಾಹದಿಂದ ಕುರಿಗಳು ಸತ್ತಿವೆ. ಜೊತೆಗೆ ಚಳಿಗಾಲದಲ್ಲಿ ಕುರಿಗಳು ಚಳಿ ತಡೆಯಲಾರದೇ ಸಾಯುತ್ತಿವೆ. ಅಲ್ಲದೇ ಕುರಿಗಳ ಸಾಕಾಣಿಕೆ ಕುಗ್ಗಿದೆ. ಈ ಎಲ್ಲಾ ಕಾರಣದಿಂದ ಮಟನ್ ಬೆಲೆ ಹೆಚ್ಚಳವಾಗಿದೆ.

ಇತ್ತೀಚಿಗೆ ದಿನಗಳಲ್ಲಿ ಮೊದಲಿನ ಹಾಗೆ ಸಾಕಷ್ಟು ಪ್ರಮಾಣದಲ್ಲಿ ಕುರಿ ಸಾಕಾಣಿಕೆಯಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಅಂದರೆ ಕುರಿ ಸಾಕಾಣಿಕೆದಾರರಿಗೆ ಕುರಿ, ಮೇಕೆಗಳನ್ನ ಮೇಯಿಸಲು ಗೋಮಾಳಗಳು ಸಿಗುತ್ತಿಲ್ಲ. ಮೊದಲಿನ ಹಾಗೆ ರೈತರೂ ಕೂಡ ಭೂಮಿಯಲ್ಲಿ ಕುರಿಗಳನ್ನ ಬಿಡುತ್ತಿಲ್ಲ. ಹೀಗಾಗಿ ಕುರಿ ಸಾಕಾಣಿಕೆ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮಟನ್ ರೇಟ್ ಏರಿಕೆ ಕಂಡಿದೆ. ಅಷ್ಟೇ ಅಲ್ಲದೇ ಮಾರುಕಟ್ಟೆಗೆ ಇತ್ತೀಚಿನ ದಿನಗಳಲ್ಲಿ ಬೌಯ್ಲರ್ ಕೋಳಿ ಲಗ್ಗೆ ಇಟ್ಟಿದ್ದು, ಇದರಿಂದಾಗಿಯೂ ಮಟನ್ ರೇಟ್ ಏರಿಕೆಗೆ ಕಾರಣವಾಗಿದೆ ಎಂದು ಮಟನ್ ವ್ಯಾಪಾರಸ್ಥರು ನಿಸಾರ್ ಅಹಮದ್ ತಿಳಿಸಿದ್ದಾರೆ.

ಮಟನ್ ಖಾದ್ಯಗಳನ್ನ ತುಂಬಾ ಇಷ್ಟಪಡುವರಿಗೆ ಇದು ಕೊಂಚ ಬೇಸರ ಮೂಡಿಸಿದೆ. ಹೀಗಾಗಿ ಮಟನ್ ರೇಟ್ ಖಾದ್ಯ ಪ್ರಿಯರ ಬಾಯಿ ಸುಡುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ಯುಗಾದಿ ವೇಳೆಗೆ ಮಟನ್ ರೇಟ್ 800-1000 ರೂಪಾಯಿಗಳಿಗೆ ಏರಿಕೆಯಾದರೆ ಅಚ್ಚರಿ ಪಡಬೇಕಿಲ್ಲ ಎಂದು ಮಟನ್ ಪ್ರಿಯ ಮಹಮದ್ ಇದ್ರೀಸ್ ಹೇಳಿದ್ದಾರೆ.

ಒಂದು ಕಡೆ ಗ್ಯಾಸ್ ರೇಟ್, ತರಕಾರಿ ರೇಟ್, ಈರುಳ್ಳಿ ರೇಟ್ ಜಾಸ್ತಿಯಾಗುತ್ತಿದೆ. ಮತ್ತೊಂದು ಕಡೆ ಮಟನ್ ದರ ಕೂಡ ಏರಿಕೆಯಾಗಿರುವುದು ಮಟನ್ ರೇಟ್ ಪ್ರಿಯರಿಗೆ ಬೇಸರ ಮೂಡಿಸಿದೆ.

Comments

Leave a Reply

Your email address will not be published. Required fields are marked *