ಅಯೋಧ್ಯೆ ರೀತಿ ಮಳಲಿ ಮಸೀದಿಯನ್ನೂ ವಾಪಾಸ್ ಪಡೆಯುತ್ತೇವೆ: ಮುತಾಲಿಕ್ ಸವಾಲು

PRAMOD MUTHALIK 1

ಮೈಸೂರು: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ತೆಗೆದು ರಾಮ ಮಂದಿರ ಮರಳಿ ಕಟ್ಟಿದ ರೀತಿಯಲ್ಲಿ ಮಳಲಿ ಮಸೀದಿಯ ಜಾಗದಲ್ಲೂ ಮೂಲ ದೇವಸ್ಥಾನ ನಿರ್ಮಿಸುತ್ತೇವೆ. ತಾಕತ್ ಇದ್ದರೆ ತಡೆಯಿರಿ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

ಮಳಲಿ ಮಸೀದಿ ಬಿಟ್ಟು ಕೊಡುವುದು ಕನಸಿನ ಮಾತು ಎಂಬ ಎಸ್‍ಡಿಪಿಐ ರಾಜ್ಯಾಧ್ಯಕ್ಷನ ಮಾತಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದ 30 ಸಾವಿರ ಮಸೀದಿಗಳ ಮೂಲದಲ್ಲಿ ದೇವಸ್ಥಾನಗಳಿವೆ. ಅವುಗಳನ್ನು ವಾಪಸ್ ಪಡೆದೇ ತೀರುತ್ತೇವೆ. ಎಸ್‍ಡಿಪಿಐಗೆ ತಾಕತ್ ಇದ್ದರೆ ಅದನ್ನು ತಡೆಯಲಿ. ಇದು ನನ್ನ ಸವಾಲು ಎಂದರು. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

ಮಳಲಿಯ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹು ಪತ್ತೆಯಾಗಿದೆ. ಅದನ್ನು ವಾಪಸ್ ಪಡೆದೇ ಪಡೆಯುತ್ತೇವೆ. ಎಲ್ಲಾ ಮಸೀದಿಗಳನ್ನು ದೇವಾಲಯ ಒಡೆದು ಕಟ್ಟಲಾಗಿದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಒಡೆದು ರಾಮ ಮಂದಿರ ಕಟ್ಟಿದ ರೀತಿ ಮಳಲಿ ಮಸೀದಿಯನ್ನು ಪಡೆಯುತ್ತೇವೆ ಎಂದರು.

ಅನುಭವ ಮಂಟಪದ ಪವಿತ್ರ ಸ್ಥಾನ ಈಗ ಅಪವಿತ್ರವಾಗಿದೆ. ಪೀರ್ ಪಾಷಾ ಬಂಗ್ಲೆಯನ್ನು ಅನುಭವ ಮಂಟಪವಾಗಿ ಮತ್ತೆ ಬದಲಾಯಿಸಬೇಕು. ಈ ನಿಟ್ಟಿನಲ್ಲಿನ ಜೂನ್ 12 ರ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲವಿದೆ ಎಂದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು

HIJAB 2

ರಾಜ್ಯದಲ್ಲಿ ಮತ್ತೆ ಆರಂಭವಾದ ಹಿಜಾಬ್ ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಿ, ಕುರಾನ್ ಶರಿಯಾ ಪ್ರಕಾರ ನಡೆಯಲು ಇದು ಪಾಕಿಸ್ತಾನ ಅಲ್ಲ. ಇದು ಭಾರತ. ಕಾನೂನು ವಿರುದ್ಧ ಹೋದವರನ್ನು ಒದ್ದು ಒಳಗೆ ಹಾಕಿ. ಈ ಮಕ್ಕಳ ಹಿಂದೆ ಮುಲ್ಲಾ ಮೌಲಿಗಳ ಷಡ್ಯಂತ್ರ ಅಡಗಿದೆ ಎಂದು ಕಿಡಿಕಾರಿದರು.

Comments

Leave a Reply

Your email address will not be published. Required fields are marked *