ತುಮಕೂರು: ಗ್ರಾಮದ ಬಹುಸಂಖ್ಯಾತ ಮುಸ್ಲಿಮರು ಪ್ರತ್ಯೇಕ ಅಂಗನವಾಡಿ ಕೇಂದ್ರವನ್ನು ತೆರೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಕುಣಿಗಲ್ ತಾಲೂಕಿನ ಬೊಮ್ಮೇನಹಳ್ಳಿ ಪಾಳ್ಯದ ಮುಸ್ಲಿಮರು ಅಂಗನವಾಡಿ ಕೇಂದ್ರಕ್ಕೆ ಬೀಗ ಮತ್ತು ಮುಳ್ಳು ಜಡಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಂಗನವಾಡಿ ಕೇಂದ್ರಕ್ಕೆ ತಮ್ಮ ಧರ್ಮದ ಕಾರ್ಯಕರ್ತೆಯನ್ನು ನಿಯೋಜಿಸುವಂತೆ ಪಟ್ಟು ಹಿಡಿದಿದ್ದು, ನವೆಂಬರ್‌ನಲ್ಲಿ ಅನ್ಯ ಸಮುದಾಯದ ಮಹಿಳೆಯನ್ನು ಅಂಗನವಾಡಿ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಇದನ್ನೂ ಓದಿ: ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಉತ್ತಮ ಆಯ್ಕೆ: ಎಂಎಸ್‌ಕೆ ಪ್ರಸಾದ್
ಸರ್ಕಾರದ ಸೌಲಭ್ಯಗಳನ್ನು ತಿರಸ್ಕರಿಸಿದ ಅವರು ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ಆಹಾರ, ಹಾಲು ಮತ್ತು ಮೊಟ್ಟೆ ವಿತರಿಸುತ್ತಿದ್ದಾರೆ. ಈ ಹಿನ್ನೆಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬಾರದು ಎಂದು ತೀರ್ಮಾನಿಸಿದ್ದಾರೆ. ಜಮಾತ್ ಸಭೆಯ ತೀರ್ಮಾನದಂತೆ ಪ್ರಾರ್ಥನಾ ಮಂದಿರದ ಪಕ್ಕದ ಹಳೆ ಕಟ್ಟಡದಲ್ಲಿ ಐದು ದಿನಗಳಿಂದ ಬಾಲವಾಡಿ ಕೇಂದ್ರ ಪ್ರಾರಂಭಿಸಿದ್ದಾರೆ.

ಮುಸ್ಲಿಮ ಸಮುದಾಯದ ಕಾರ್ಯಕರ್ತೆಯನ್ನು ನಿಯೋಜಿಸುವವರೆಗೂ ಹೋರಾಟ ಮುಂದುವರೆಯುವ ಲಕ್ಷಣ ಇದ್ದು, ಮನೆಗಳಿಗೆ ಭೇಟಿ ನೀಡಿ ಮನವಿ ಮಾಡಿದರು, ಸಹ ಪೋಷಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿಲ್ಲ. ಸೌಹಾರ್ದತೆಯುತವಾಗಿ ವಿವಾದ ಬಗೆಹರಿಸುವ ಬದಲು ಅಧಿಕಾರಿಗಳು ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ
ಕಳೆದ ಎರಡು ತಿಂಗಳಿAದ ಮಕ್ಕಳಿಗೆ ಆಹಾರ ವಿತರಣೆಯಾಗಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಸುಮಾ ಹೇಳಿದ್ದಾರೆ.

Leave a Reply