ಮುಸ್ಲಿಂ ಯುವಕರಿಗೆ ಹಿಂದೂ ವ್ಯಕ್ತಿಯಿಂದ ಹನುಮಾನ್ ಚಾಲೀಸಾ ಬೋಧನೆ

ನವದೆಹಲಿ: ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಮರಿಗೆ ಹನುಮಾನ್ ಚಾಲೀಸಾ (Hanuman Chalisa) ಕಲಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ (Uttar Pradesh) ಅಲಿಗಢದ ಸಚಿನ್ ಶರ್ಮಾ ಹನುಮಾನ್ ಚಾಲೀಸಾವನ್ನು ಓದುತ್ತಿರುವ ಯುವಕ. ಈತ ವೀಡಿಯೋದಲ್ಲಿ ಹನುಮಂತ ದೇವಸ್ಥಾನದಲ್ಲಿ (Temple) ಕೇಸರಿ ಶಾಲನ್ನು ಧರಿಸಿ ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದಾನೆ. ಆತನ ಪಕ್ಕ ಮುಸಲ್ಮಾನ್ ಯುವಕರ ಗುಂಪೊಂದು ಕುಳಿತಿದ್ದು, ಅವರು ಹನುಮಾನ್ ಚಾಲೀಸಾವನ್ನು ಕೇಳುತ್ತಿದ್ದಾರೆ.

ಸಚಿನ್ ಶರ್ಮಾ ಅಲಿಗಢದಲ್ಲಿ ಅಖಿಲ ಭಾರತ ಹಿಂದೂ ಸೇನೆಯ ಜಿಲ್ಲಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾನೆ. ಈ ವೀಡಿಯೋ ಬಗ್ಗೆ ಸಚಿನ್ ಶರ್ಮಾ ಮಾತನಾಡಿ, ನಾನು ಹನುಮಾನ್ ಚಾಲೀಸಾವನ್ನು ಕಲಿಸಿದ ಪಾಠಗಳನ್ನು ಇತರ ಸಮುದಾಯದ ಜನರಿಗೆ ತಿಳಿಸಿ ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಪಾಕಿಸ್ತಾನದ ಕಿರುಕುಳ, ತಾರತಮ್ಯಕ್ಕೆ ಬೇಸತ್ತು ಭಾರತಕ್ಕೆ ಬಂದ 100 ಹಿಂದೂಗಳು

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಧಾರ್ಮಿಕ ಬೋಧಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹನುಮಾನ್ ಚಾಲೀಸಾ ಓದುವುದು ಸಮಸ್ಯೆಯಲ್ಲ. ಆದರೆ ಇತರ ಸಮುದಾಯಗಳ ಸದಸ್ಯರ ಮೇಲೆ ಹೇರುವುದು ಅಸಾಂವಿಧಾನಿಕ ಎಂದು ಕಿಡಿಕಾರಿದ್ದಾರೆ. ಇಗ್ಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಹಸ್ತಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಪಾಕಿಸ್ತಾನ ಅಪಾಯಕಾರಿ ಅಲ್ಲ, ಜವಾಬ್ದಾರಿಯುತ ರಾಷ್ಟ್ರ: ಶೆಹಬಾಜ್ ಷರೀಫ್

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *