ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು’

ವಾಸುದೇವ ರೆಡ್ಡಿ ಚೊಚ್ಚಲ ನಿರ್ದೇಶನದಲ್ಲಿ ತೆರೆ ಕಾಣಲು ಸಜ್ಜಾಗಿರುವ ಸಿನಿಮಾ ‘ಮೈಸೂರು’. ಮಾರ್ಚ್ 4ರಂದು ಪ್ರೇಕ್ಷಕರೆದುರು ಬರಲು ಸಜ್ಜಾಗಿರುವ ಈ ಸಿನಿಮಾ ಈಗಾಗಲೇ ಸಿನಿಪ್ರಿಯರ ಮನಸ್ಸಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಸಂಗೀತಮಯ ಸಿನಿಮಾದಲ್ಲಿ ಹಾಡುಗಳು ಒಂದಕ್ಕಿಂತ ಒಂದು ಮನಸೆಳೆದಂತೆ ಹಾಡಿನ ಜೊತೆಗೆ ಕಲರ್ ಫುಲ್ ಲೊಕೇಶನ್ ಗಳು ಕಣ್ಮನ ಸೆಳೆಯುತ್ತಿವೆ. ಇಂತಹ ಚೆಂದದ ಲೊಕೇಶನ್‍ಗಳನ್ನು ಮೈಸೂರಿಗಾಗಿಯೇ ಸೆರೆ ಹಿಡಿದಿದ್ದಾರೆ ಕ್ಯಾಮೆರಾ ಮ್ಯಾನ್ ಭಾಸ್ಕರ್.ವಿ.ರೆಡ್ಡಿ.

‘ಮೈಸೂರು’ ಎಂಬ ಶೀರ್ಷಿಕೆ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ನಿರ್ದೇಶಕರು ಹೆಸರಿಗೆ ತಕ್ಕಂತೆ ಮೈಸೂರನ್ನು ಅಷ್ಟೇ ಸೊಗಸಾಗಿ ತೆರೆ ಮೇಲೆ ತಂದಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು, ಛಾಯಾಗ್ರಾಹಕ ಭಾಸ್ಕರ್.ವಿ.ರೆಡ್ಡಿ ಅವರಿಂದ. ಮ್ಯೂಸಿಕಲ್ ಲವ್ ಸ್ಟೋರಿಗೆ ತಕ್ಕಂತೆ ಸಿನಿಮಾವನ್ನು ಸೆರೆ ಹಿಡಿಯಲಾಗಿದ್ದು, ಪ್ರಮುಖವಾಗಿ ಮೈಸೂರಿನಲ್ಲಿ ಹೆಚ್ಚಿನ ಚಿತ್ರೀಕರಣ ನಡೆಸಿದ್ದು, ಶ್ರೀರಂಗಪಟ್ಟಣ. ಸಕಲೇಶಪುರ, ಹೊನ್ನಾವರ, ಕಟಕ್, ಒಡಿಶಾ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಪ್ರಿಯರಿಗೆ ಖಂಡಿತ ಈ ಸಿನಿಮಾ ವಿಶ್ಯುವಲ್ ಟ್ರೀಟ್ ನೀಡುತ್ತೆ ಎನ್ನುವುದು ಭಾಸ್ಕರ್ ವಿ ರೆಡ್ಡಿ ಅವರ ಅನಿಸಿಕೆಯಾಗಿದೆ. ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೈಭವಕ್ಕೆ ಇಂದು ಚಾಲನೆ

ಚಿತ್ರರಂಗದಲ್ಲಿ ಅಸೋಸಿಯೇಟ್ ಕ್ಯಾಮೆರಾಮ್ಯಾನ್ ಆಗಿ ದುಡಿದ ಅನುಭವ ಭಾಸ್ಕರ್.ವಿ.ರೆಡ್ಡಿ ಅವರಿಗಿದೆ. ಪವನ್ ಒಡೆಯರ್ ನಟನೆಯ ‘ಪ್ರೀತಿ ಗೀತಿ ಇತ್ಯಾದಿ’ ಸಿನಿಮಾ ಮೂಲಕ ಸ್ವತಂತ್ರ ಛಾಯಾಗ್ರಹಕರಾಗಿ ಗುರುತಿಸಿಕೊಂಡರು. ನಂತರ ತಮ್ಮ ಅದ್ಭುತ ಕ್ಯಾಮೆರಾ ಕೈಚಳಕದಲ್ಲಿ ಪ್ರೇಮ ಗೀಮಾ ಜಾನೆದೋ, ಅನ್ನದಾತ ಸೇರಿದಂತೆ ಒರಿಯಾ ಭಾಷೆಯ ಸಿನಿಮಾಗಳಿಗೂ ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಹೀಗೆ ಸಾಕಷ್ಟು ಅನುಭವ ಹೊಂದಿರುವ ಭಾಸ್ಕರ್.ವಿ.ರೆಡ್ಡಿ ಮೈಸೂರು ಸಿನಿಮಾವನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ.

ಮಾರ್ಚ್ 4ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಸಂಹಿತ್ ಹಾಗೂ ಪೂಜಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಒಂದಕ್ಕಿಂತ ಒಂದು ಸುಂದರವಾಗಿ ಮೂಡಿಬಂದಿವೆ. ರಮಣಿ ಸುಂದರೇಶನ್, ಅನಿಲ್ ಕೃಷ್ಣ ಮತ್ತು ವಿಜಯ್ ರಾಜ್ ಐದು ಹಾಡುಗಳನ್ನು ಮೈಸೂರಿಗಾಗಿಯೇ ರೂಪಿಸಿದ್ದಾರೆ. ರಾಜೇಶ್ ಕೃಷ್ಣನ್, ಉಷಾ ಪ್ರಕಾಶ್, ಇಶಾ ಸುಚಿ, ಪಂಚಮ್, ಚೇತನ್ ನಾಯಕ್, ಪವನ್ ಪಾರ್ಥ ಮುಂತಾದವರು ಹಾಡುಗಳಿಗೆ ದನಿಯಾಗಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ!

ತಾರಾಗಣದಲ್ಲಿ ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಸೂರ್ಯ, ರವಿಶಂಕರ್, ಜ್ಯೂನಿಯರ್ ನರಸಿಂಹರಾಜು, ಜಯಶ್ರೀ, ಒಡಿಶಾದ ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಫಂಡಾ ಮುಂತಾದವರ ತಾರಾಗಣವಿದೆ. ಎಸ್.ಆರ್.ಕಂಬೈನ್ಸ್ ಬ್ಯಾನರ್ ನಡಿ ನಿರ್ದೇಶಕರಾದ ವಾಸುದೇವ್ ರೆಡ್ಡಿ ಬಂಡವಾಳ ಹೂಡಿ ಚಿತ್ರವನ್ನು ತೆರೆ ಮೇಲೆ ತಂದಿದ್ದಾರೆ.

Comments

Leave a Reply

Your email address will not be published. Required fields are marked *