20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಸಿನಿರಂಗದಲ್ಲೇ ಮುನ್ನಾಭಾಯಿ ಎಂದೇ ಪ್ರಸಿದ್ಧ. ಇದೇ ಮೊದಲಬಾರಿಗೆ ದಕ್ಷಿಣ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟ ಕೆಜಿಎಫ್-2 ಸಿನಿಮಾದಲ್ಲಿ ಭರ್ಜರಿ ಗೆಟಪ್‍ನಲ್ಲಿ ಮಿಂಚುತ್ತಿದ್ದಾರೆ. ಈ ಶೂಟಿಂಗ್ ವೇಳೆ ಅವರಿಗೆ ಆರೋಗ್ಯ ಸಮಸ್ಯೆ ಇದ್ದು, ಸೇಟ್‌ನಲ್ಲಿ ಎಷ್ಟು ಕಷ್ಟಪಟ್ಟರು ಎಂಬುದನ್ನು ವಿವರಿಸಿದ್ದಾರೆ.

ಕೆಜಿಎಫ್-2 ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಸಂಜಯ್ ನಟಿಸಿದ್ದಾರೆ. ಇವರನ್ನು ಭಿನ್ನ ಗೆಟಪ್‍ನಲ್ಲಿ ಮೊದಲಬಾರಿಗೆ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅದರಲ್ಲಿಯೂ ಬಾಲಿವುಡ್ ಅಂಗಳದಲ್ಲಿಯೂ ಈ ನಟನ ಗೆಟಪ್ ಫುಲ್ ಟಾಕ್ ಆಗುತ್ತಿದೆ. ಈ ನಡುವೆ ಶೂಟಿಂಗ್ ಸಮಯದಲ್ಲಿಯೇ ಸಂಜಯ್‍ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆ ಶೂಟಿಂಗ್‌ಗೆ ಇವರು ಸ್ವಲ್ಪ ಬ್ರೇಕ್ ತೆಗೆದುಕೊಂಡು ಮತ್ತೆ ನಟನೆಗೆ ಮರಳಿದರು. ಈ ಕಾರಣಕ್ಕೆ ನನಗೆ ಶೂಟಿಂಗ್ ಸಮಯದಲ್ಲಿ ತುಂಬಾ ಕಷ್ಟವಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ರಾಕಿಭಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

Trailer of 'KGF Chapter 2' won heart of fans, See Sanjay Dutt and Yash's look | NewsTrack English 1

ಕೆಜಿಎಫ್-2 ಶೂಟಿಂಗ್ ಕುರಿತು ಮಾತನಾಡಿದ ಸಂಜಯ್, ನನಗೆ ಕೊಟ್ಟ ಕಾಸ್ಟ್ಯೂಮ್‌ 20ಕ್ಕೂ ಹೆಚ್ಚು ಕೆಜಿ ತೂಕ ಇತ್ತು. ಅದನ್ನು ಹಾಕಿಕೊಂಡು ಶೂಟ್ ಮಾಡುವುದು ತುಂಬಾ ಕಷ್ಟವಾಗಿತ್ತು. ನನಗೆ ಕೊಟ್ಟ ಆಯುಧ ಲೆದರ್‌ನಿಂದ ಮಾಡಿಲಾಗಿತ್ತು. ಅದಕ್ಕೆ ನನಗೆ ಸಿನಿಮಾ ಮಾಡುವುದು ಸುಲಭವಾಗಿರಲಿಲ್ಲ. ಹಲವು ತೊಂದರೆಗಳನ್ನು ನಾನು, ಮತ್ತೆ ಚಿತ್ರತಂಡ ಎದುರಿಸಬೇಕಾಯಿತು. ಅದರಲ್ಲಿಯೂ ಕ್ಲೈಮ್ಯಾಕ್ಸ್ ಶೂಟ್‍ನಲ್ಲಿ ಇನ್ನು ಹೆಚ್ಚಿನ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡಿದ್ದೆವು ಎಂದು ವಿವರಿಸಿದರು.

ನನ್ನ ತಮ್ಮ ಯಶ್ ಸಹ ಅಷ್ಟೇ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡಿದ್ದರು. ನಾವಿಬ್ಬರು ಧೂಳಿನಲ್ಲಿ ಕೆಲಸ ಮಾಡಬೇಕಿತ್ತು. ಇದು ಕಷ್ಟ ಎನಿಸಿದರೂ ತುಂಬಾ ಖುಷಿ ಮತ್ತು ಪ್ರೀತಿಯಿಂದ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ನಟನೆ ಬಗ್ಗೆ ತಮಗಿರುವ ಪ್ರೀತಿ ಕುರಿತು ಮಾತನಾಡಿದ ಅವರು, ನಾನು ಕಲಾವಿದ. ಕಲಾವಿದನಾಗಿಯೇ ಸಾಯುತ್ತೇನೆ. ನಾನು ಯಾವ ರೀತಿಯ ಪಾತ್ರ ಮಾಡಿದರೂ ಇಷ್ಟಪಟ್ಟು ಮಾಡುತ್ತೇನೆ. ಅದಕ್ಕೆ ನನಗೆ ಖುಷಿಯಿದೆ. ನಾನು 45 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇದ್ದೇನೆ. ಆದರೆ ಈ ಪಾತ್ರ ನನಗೆ ಭಿನ್ನವಾದ್ದನ್ನು ಹೇಳಿಕೊಟ್ಟಿದೆ ಎಂದರು. ಇದನ್ನೂ ಓದಿ: ನನ್ನ 45 ವರ್ಷಗಳ ಸಿನಿಜರ್ನಿಯಲ್ಲಿ ಕೆಜಿಎಫ್-2 ಒಂದು ಅದ್ಭುತ ಪಾಠ: ಸಂಜಯ್ ದತ್

ಈ ಹಿಂದೆ ಸಂಜಯ್ ಅನಾರೋಗ್ಯದ ಕಾರಣದಿಂದ ಸಾಹಸ ದೃಶ್ಯಗಳಿಗೆ ಡ್ಯೂಪ್ ಬಳಸಿ ಶೂಟ್ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತು. ಆದರೆ ಸಂಜಯ್ ಅದನ್ನು ನಿರಾಕರಿಸಿದ್ದರು.

Comments

Leave a Reply

Your email address will not be published. Required fields are marked *