ಡಿಸಿಎಂ ಹೊಗಳಿದ ಎಸ್‍ಟಿಎಸ್‍ಗೆ ವೇದಿಕೆಯಲ್ಲೇ ಮುನಿರತ್ನ ತಿರುಗೇಟು

ಬೆಂಗಳೂರು: ಜನಸ್ಪಂದನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರನ್ನು ಹೊಗಳಿದ ಎಸ್.ಟಿ ಸೋಮಶೇಖರ್ (ST Somashekhar) ಅವರಿಗೆ ಮಾಜಿ ಸಚಿವ ಮುನಿರತ್ನ (Muniratna) ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಶಾಶ್ವತವಲ್ಲ. ಸಿ. ಅಶ್ವತ್ ಅವರು ಒಂದು ಹಾಡನ್ನ ಹಾಡುತ್ತಾರೆ. ಒಳಿತು ಮಾಡು ಮನುಷ, ಇರೋದು ಮೂರು ದಿವಸ ಅಂತ ಹಾಡಿದ್ದಾರೆ. ಇವರ ಹಾಡಿಗೆ ಅರ್ಥಪೂರ್ಣವಾದ ಕೆಲವು ವ್ಯಕ್ತಿಗಳಿದ್ದಾರೆ. ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್, ಎಸ್.ಎಂ ಕೃಷ್ಣಾ, ಕೆಂಗಲ್ ಹನುಮಂತಯ್ಯ ಇವರು ಮಾಡಿದ ಕೆಲಸ ಶಾಶ್ವತ ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಬಿಜೆಪಿ ಸೇರ್ಪಡೆ?

ಒಳಿತು ಮಾಡು ಮನಸು ಇರೋದು ಮೂರು ದಿವಸ. ಇದನ್ನ ನಾವು ಅಳವಡಿಸಿಕೊಳ್ಳಬೇಕಿದೆ. ಇಂತಹ ಒಳಿತು ಮಾಡಿದವರಲ್ಲಿ ಮೂರು ಜನರನ್ನ ನೆನಪು ಮಾಡಿಕೊಳ್ತೇವೆ. ಕೆಂಪೇಗೌಡರು, ನಾಲ್ವಡಿ ಕೃಷ್ಣರಾಜ ಒಡೆಯರು, ಎಸ್ ಎಂ ಕೃಷ್ಣ ಅವರು ನೆನಪಾಗ್ತಾರೆ. ನಮ್ಮ ಉಪಮುಖ್ಯಮಂತ್ರಿ ಅವರ ಬಗ್ಗೆ ಸಾಕಷ್ಟು ನೀರಿಕ್ಷೆ ಇಟ್ಟಿದ್ದೇವೆ. ಅವರು ಮಾಡಿಯೇ ಮಾಡುತ್ತಾರೆ. ನಾನು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ ಮಾತಾಡೋಕೆ ಹೋಗಲ್ಲ. ಮತದಾರರು ದೇವರುಗಳು ನೀವೇ ಸಮಸ್ಯೆಗಳನ್ನು ಹೇಳಿ. ಏನಾದ್ರು ಕೊಡುಗೆ ಕೊಟ್ಟೆ ಕೊಡ್ತಾರೆ ಈ ಕ್ಷೇತ್ರಕ್ಕೆ ಅಂತಾ ನಮಗೆ ನಂಬಿಕೆ ಇದೆ ಎಂದರು. ಇದನ್ನೂ ಓದಿ: ದೇಶದ ಸಂಪತ್ತು ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ; ಸಿದ್ದರಾಮಯ್ಯಗೆ ಮಹಾ ಅಧಿವೇಶನದಲ್ಲಿ ಅಮಿತ್ ಶಾ ತಿರುಗೇಟು

ಡಿಸಿಎಂ ಮೇಲೆ ಅಪಾರವಾದ ಭರವಸೆ ರಾಜ್ಯದ ಜನ ಇಟ್ಟಿದ್ದಾರೆ. ಬೆಂಗಳೂರಿನಲ್ಲಿ 2 ಕೋಟಿ ಜನರು ಇದ್ದಾರೆ. ನಾನು, ಡಿಸಿಎಂ ಅವರು ಬೆಂಗಳೂರನ್ನು ಬಹಳ ಹತ್ತಿರದಿಂದ ನೋಡಿದ್ದೇವೆ. ಹಿಂದೆ ಎಷ್ಟಿತ್ತು, ಈಗ ಎಷ್ಟು ಬೆಳೆದಿದೆ ಅಂತ ಗೊತ್ತಾಗಿದೆ. ಇದು ರಾಜಕೀಯ ವೇದಿಕೆ ಮಾಡುವ ಕಾರ್ಯಕ್ರಮ ಅಲ್ಲ. ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ನೀವೇ ಹೇಳಿ. ಅಧಿಕಾರಿಗಳಿಗೂ ಒಳ್ಳೆಯದಾಗಲಿ. ಅಧಿಕಾರಿಗಳ ರೀತಿ ದೇವರು ಬಂದಿದ್ದಾರೆ. ನೀವು ಬಗೆಹರಿಸಿದಿದ್ದರೆ ಜನ ಇಲ್ಲಿಗೆ ಬರುತ್ತಾ ಇರಲಿಲ್ಲ. ಸಮಸ್ಯೆ ನೂರೆಂಟು, ಪರಿಹಾರ ಒಂದೇ ಸ್ಥಳದಲ್ಲಿ ಎಂದು ಹೇಳಿದರು.

ವೇದಿಕೆಯಲ್ಲಿ ಭಾಷಣಕ್ಕೆ ಶಾಸಕ ಮುನಿರತ್ನ ಆಗಮಿಸತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದರು. ಈ ವೇಳೆ ಶಾಸಕರು, ಇದು ಜೈಕಾರ ಹಾಕುವ ಸಮಯ ಅಲ್ಲ ಕಾರ್ಯಕ್ರಮ ಅಲ್ಲ. ಸಮಸ್ಯೆ ಹೇಳಿಕೊಳ್ಳಿವ ಕಾರ್ಯಕ್ರಮ ಎಲ್ಲರಿಗೂ ಒಳ್ಳೆದಾಗಲಿ.