ಲಾಡ್ಜ್‌ನಲ್ಲಿ ಮಂಡ್ಯ ಕಾಂಗ್ರೆಸ್ ನಾಯಕನಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ!

ಬೆಂಗಳೂರು: ಮಂಡ್ಯದ ಕಾಂಗ್ರೆಸ್ ನಾಯಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.

ಮೂಡಾ ಮಾಜಿ ಅಧ್ಯಕ್ಷನೂ ಆಗಿರುವ ಮುನಾವರ್ ಖಾನ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದಾರೆ. ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಕರೆಸಿ ಅಲ್ಲಿಂದ ಮೆಜೆಸ್ಟಿಕ್‍ನಲ್ಲಿರುವ ವಂಶಿ ಲಾಡ್ಜ್‌ಗೆ ಕರೆದುಕೊಂಡು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮುನಾವರ್ ಖಾನ್ ಸಾಕಷ್ಟು ಜನರು ಲಾಡ್ಜ್‌ನಲ್ಲಿದ್ದಾರೆ ಎಂದು ಕರೆಸಿಕೊಂಡಿದ್ದು, ಅಲ್ಲಿ ಕಂಠಪೂರ್ತಿ ಕುಡಿದು ಬಂದು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ನೊಂದ ಮಹಿಳೆ ಉಪ್ಪಾರಪೇಟೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?
ಮಂಡ್ಯ ನಿವಾಸಿಯಾದ ನನಗೆ ಅಧ್ಯಕ್ಷ ಮುನಾವರ್ ಖಾನ್ ಪರಿಚಯವಿದೆ. ಇಬ್ಬರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುನಾವರ್ ನಂಬರ್ ನಿಂದ ಫೋನ್ ಮಾಡಿ ಬೆಂಗಳೂರಿನಲ್ಲಿ ಕಾರ್ಯಕ್ರಮವಿದೆ ಬರಬೇಕು ಎಂದು ತಿಳಿಸಿದ್ದರು. ಅದರಂತೆಯೇ ನಾನು ಬೆಂಗಳೂರಿಗೆ ಬಂದು ಮುನಾವರ್ ಗೆ ಫೋನ್ ಮಾಡಿದೆ. ಅವರು ಬಂದು ನನ್ನನ್ನು ಮೆಜಿಸ್ಟಿಕ್ ನ ವಂಶಿ ಲಾಡ್ಜ್‌ಗೆ ಕರೆದುಕೊಂಡು ಹೋದರು. ಅಲ್ಲಿ ರೂಮ್ ಬುಕ್ ಮಾಡಿ ಕೂರಿಸಿ. ಇಲ್ಲೆ ಇರು ಎಂದು ಹೊರಗೆ ಹೋಗಿದ್ದರು. ಸ್ವಲ್ಪ ಸಮಯದ ನಂತರ ಮದ್ಯಪಾನ ಮಾಡಿಕೊಂಡು ಬಂದು ನಿನ್ನ ಬಳಿ ಮಾತನಾಡಬೇಕು ಎಂದು ರೂಮಿನ ಬಾಗಿಲು ಹಾಕಿದರು. ಬಳಿಕ ಬಲವಂತವಾಗಿ ನನ್ನನ್ನು ಹಿಡಿದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು. ಅಷ್ಟರಲ್ಲಿ ನಾನು ಅವರನ್ನು ತಳ್ಳಿ ನನ್ನ ಸ್ನೇಹಿತೆಗೆ ಫೋನ್ ಮಾಡಿದೆ. ಆಕೆ ತನ್ನ ಪರಿಚಯಸ್ಥರನ್ನು ರೂಮಿಗೆ ಕಳುಹಿಸಿ ನನ್ನನ್ನು ಕಾಪಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುನಾವರ್ ಖಾನ್ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ನ್ಯಾಯ ಕೊಡಿಸಿ ಎಂದು ಮಹಿಳೆ ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *