ಮುಂಬೈ-ಮಂಗಳೂರಿಗೆ ಶೀಘ್ರವೇ ವಿಮಾನ ಸಂಚಾರ ಆರಂಭ!

AIR INDIA

ಹುಬ್ಬಳ್ಳಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಮುಂಬೈ ನಡುವೆ ಹಾಗೂ ಇಂಡಿಗೋ ಸಂಸ್ಥೆ ಹುಬ್ಬಳ್ಳಿ, ಮಂಗಳೂರು, ಹುಬ್ಬಳ್ಳಿ-ಅಹಮದಾಬಾದ್ ನಡುವೆ ವಿಮಾನ ಸಂಚಾರವನ್ನು ಶೀಘ್ರವೇ ಆರಂಭಿಸಲಿವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ ತಿಳಿಸಿದ್ದಾರೆ.

 

ಏರ್ ಇಂಡಿಯಾದ ಹುಬ್ಬಳ್ಳಿ-ಮುಂಬೈ ಮಾರ್ಗದ ಸ್ಲಾಟ್‍ಗೆ ಈಗಾಗಲೇ ಅನುಮತಿ ದೊರೆತಿದೆ. ಶೀಘ್ರದಲ್ಲೇ ದಿನಾಂಕ ನಿಗದಿಯಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಟ ಪುನೀತ್ ಆರೋಗ್ಯ ಸ್ಥಿತಿ ಗಂಭೀರ- ಐಸಿಯುನಲ್ಲಿ ಚಿಕಿತ್ಸೆ

ಇಂಡಿಗೋ ಸಂಸ್ಥೆ ಹುಬ್ಬಳ್ಳಿಯಿಂದ ಅಹಮದಾಬಾದ್, ದೆಹಲಿ ಹಾಗೂ ಮಂಗಳೂರು ಮಾರ್ಗದಲ್ಲಿ ನೂತನ ಸೇವೆ ಒದಗಿಸಲು ಆಸಕ್ತಿ ತೋರಿದೆ. ಜೈಪುರ ಮಾರ್ಗಕ್ಕೂ ಸೇವೆ ಆರಂಭಿಸುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೀವು ನನ್ನ ಫೇವರೆಟ್ – ಬಾಲಕಿಯ ಸಿಹಿ ಮಾತಿಗೆ ನೀರಜ್ ಚೋಪ್ರಾ ಪ್ರತಿಕ್ರಿಯೆ ಏನು ಗೊತ್ತಾ?

ಸೆಪ್ಟೆಂಬರ್‍ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ಒಟ್ಟು 518 ವಿಮಾನಗಳು ಸಂಚರಿಸಿದ್ದು, 17,998 ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2019ರ ಸೆಪ್ಟೆಂಬರ್‍ನಲ್ಲಿ 601 ವಿಮಾನಗಳ ಮೂಲಕ 36,000 ಪ್ರಯಾಣಿಕರು ಸಂಚರಿಸಿದ್ದರು.

Comments

Leave a Reply

Your email address will not be published. Required fields are marked *