ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಈಗ ಬಾಟಲ್ ಕ್ಯಾಪ್ ಚಾಲೆಂಜ್ ತುಂಬಾ ವೈರಲ್ ಆಗುತ್ತಿದೆ. ಈಗ ಈ ಜಾಲೆಂಜ್ ಸ್ವೀಕರಿಸಿರುವ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅವರು ನೀರನ್ನು ಉಳಿಸಿ ಎಂದು ವಿಶಿಷ್ಟ ರೀತಿಯಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಲವು ಚಾಲೆಂಜ್‍ಗಳು ವೈರಲ್ ಆಗುತ್ತೆ. ಈ ಹಿಂದೆ ಫಿಟ್ನೆಸ್ ಚಾಲೆಂಜ್ ಶುರು ಆಗಿತ್ತು. ಆದರೆ ಈಗ ಬಾಟಲ್ ಕ್ಯಾಪ್ ಚಾಲೆಂಜ್ ಸದ್ದು ಮಾಡುತ್ತಿದೆ. ಹಾಲಿವುಡ್‍ನಿಂದ ಬಾಲಿವುಡ್ ಮತ್ತು ಸ್ಯಾಂಡಲ್‍ವುಡ್‍ವರೆಗೂ ಹಲವು ಕಲಾವಿದರು ಈ ಚಾಲೆಂಜ್ ಸ್ವೀಕರಿಸಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
https://twitter.com/BeingSalmanKhan/status/1150382907518644224
ಈಗ ಈ ಜಾಲೆಂಜ್‍ನ್ನು ತನ್ನ ಜಿಮ್‍ನಲ್ಲಿ ಮಾಡಿರುವ ಸಲ್ಲು ಬಾಟಿಲಿಯನ್ನು ಕಾಲಿನಿಂದ ಒದೆಯುವುದರ ಬದಲು ಅದನ್ನು ಉದಿ ಕ್ಯಾಪ್ ಬೀಳಿಸಿ ನಂತರ ಪಾನಿ ಬಚಾವ್ ಎಂಬ ಸಂದೇಶವನ್ನು ಹೇಳಿ ಬಾಟಲ್‍ನಲ್ಲಿ ಇರುವ ನೀರನ್ನು ಸಂಪೂರ್ಣವಾಗಿ ಕುಡಿದು ಈ ಜಾಲೆಂಜ್‍ನ್ನು ಮಾಡಿದ್ದಾರೆ. ಈ ಮೂಲಕ ನೀರನ್ನು ಉಳಿಸಿ ಎಂಬ ಸಂದೇಶ ನೀಡಿದ್ದಾರೆ.
I couldn't resist 😉#BottleCapChallenge
Inspired by my action idol #JasonStatham, I will repost/retweet the Best I see, come on Guys and Girls get your Bottle out and your Legs in the Air, Let's Do This 💪🏽 #FitIndia #WednesdayMotivation pic.twitter.com/RsDYDWhS5n
— Akshay Kumar (@akshaykumar) July 3, 2019
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೊದಲು ಈ ಚಾಲೆಂಜ್ ಪ್ರಾರಂಭಿಸಿದರು. ಇದೀಗ ಸ್ಯಾಂಡಲ್‍ವುಡ್‍ಗೂ ಈ ಚಾಲೆಂಜ್ ಲಗ್ಗೆ ಇಟ್ಟಿದ್ದು, ನಟ ಅರ್ಜುನ್ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನಟಿಯರಾದ ರಚಿತಾ ರಾಮ್, ಹರಿಪ್ರಿಯಾ, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ಕಲಾವಿದರು ಈ ಚಾಲೆಂಜ್ ಸ್ವೀಕರಿಸಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
My kind of #bottlecapchallange 😋🙈🙊😂🤣 Power of a kiss with love is very strong u see 😈😆 pic.twitter.com/KzRSHmZdo8
— Hariprriya Simha (@HariPrriya6) July 7, 2019
ನಟಿಯರಾದ ಹರಿಪ್ರಿಯಾ ಹಾಗೂ ಹರ್ಷಿಕಾ ಪೂಣಚ್ಚ ಬಾಟಲ್‍ಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಈ ಚಾಲೆಂಜ್ ಸ್ವೀಕರಿಸಿದ್ದರು. ವಿಶೇಷ ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ವಿನೀಶ್ ಕೂಡ ಈ ಚಾಲೆಂಜ್ ಸ್ವೀಕರಿಸಿದ್ದು, ಅವರ ತಾಯಿ ವಿಜಯಲಕ್ಷ್ಮಿ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
https://twitter.com/vijayaananth2/status/1147752015558148096
ಏನಿದು ಚಾಲೆಂಜ್?
ಒಂದು ಟೇಬಲ್ ಮೇಲೆ ಒಂದು ಬಾಟಲಿ ಇಡಬೇಕು ಅದರ ಮುಚ್ಚಳವನ್ನು ಬಾಟಲ್ ಮೇಲೆ ಸಡಿಲವಾಗಿ ತಿರುಗಿ ಇಡಬೇಕು. ನಂತರ ಚಾಲೆಂಜ್ ಸ್ವೀಕರಿಸಿದವರು ಸ್ವಲ್ಪ ದೂರದಲ್ಲಿ ನಿಂತು ಒಂದು ಸುತ್ತು ತಿರುಗಿ ಕಾಲಿನಿಂದ ಬಾಟಲಿ ಕ್ಯಾಪನ್ನು ಒದಿಯಬೇಕು. ಈ ಪ್ರಕ್ರಿಯೆಯಲ್ಲಿ ಬಾಟಲಿ ಕೆಳಗೆ ಬೀಳಬಾರದು. ಹೀಗೆ ಬಾಟಲ್ ಬೀಳದಂತೆ ಕ್ಯಾಪ್ ಮಾತ್ರ ಕೆಳಗೆ ಬೀಳಿಸಿದರೆ ಈ ಚಾಲೆಂಜ್ ಗೆದ್ದಂತೆ.
https://twitter.com/actressharshika/status/1148450466511982592

Leave a Reply