ಸ್ನೇಹ, ಪ್ರೀತಿ, ಮದ್ವೆ- ಹನಿಮೂನ್ ನಂತ್ರ ಪೊಲೀಸ್ ಠಾಣೆ ಮೆಟ್ಟಿಲೇರಿದ!

ಮುಂಬೈ: ನವವಿವಾಹಿತನಿಗೆ ಹನಿಮೂನಿನಲ್ಲಿ ತನ್ನ ಪತ್ನಿ ಯುವತಿಯಲ್ಲ ತನ್ನಂತೆಯೇ ಹುಡುಗ ಎಂದು ತಿಳಿದು ಆಘಾತಗೊಂಡಿದ್ದು, ಈಗ ಆತ ತನಗೆ ಮೋಸವಾಗಿದೆ ಅಂತ ಪೊಲೀಸರಿಗೆ ದೂರು ನೀಡಿದ್ದಾನೆ.

ಯಾಮೀನ್ ಸೈಯದ್(22) ಮೋಸ ಹೋದ ವರ. ಈತ ಮುಂಬೈನ ಗೋವಂಡೀ ಪ್ರದೇಶದ ನಿವಾಸಿಯಾಗಿದ್ದು, ಈತನಿಗೆ ತಾನು ಓದುತ್ತಿದ್ದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿತ್ತು. ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗಿತ್ತು. ಇವರಿಬ್ಬರ ಪ್ರೀತಿಯ ವಿಷಯವನ್ನು ಮನೆಯಲ್ಲಿ ತಿಳಿಸಿದ್ದಾರೆ. ನಂತರ ಎರಡು ಕುಟುಂಬದವರೂ ಒಪ್ಪಿ ಮದುವೆಯೂ ಮಾಡಿಸಿದ್ದಾರೆ. ಮದುವೆಯಾದ ನಂತರ ನವದಂಪತಿ ಹನಿಮೂನ್ ಗೆ ಹೋಗಿದ್ದಾರೆ. ಅಲ್ಲಿ ತಾನು ಮದುವೆಯಾಗಿದ್ದು ಹುಡುಗಿಯನ್ನಲ್ಲ, ಹುಡುಗ ಎಂಬ ಸತ್ಯ ತಿಳಿಸಿದೆ.

ನಾವು ಪ್ರೀತಿ ಮಾಡುತ್ತಿದ್ದ ದಿನಗಳಲ್ಲಿ ಆಕೆ ಯಾವಾಗಲೂ ನನ್ನಿಂದ ದೂರವಿರುತ್ತಿದ್ದಳು. ಕಾರಣ ಕೇಳಿದರೆ ನನಗೆ ಅನಾರೋಗ್ಯ, ಆಪರೇಷನ್ ಆಗಿದೆ ಎಂದು ಹೇಳುತ್ತಿದ್ದಳು. ಆದರೆ ನಾವು ಹನಿಮೂನ್‍ಗೆ ಹೋದಾಗ ಆಕೆ ಹುಡುಗ ಎಂದು ಗೊತ್ತಾಯಿತು. ಇದು ನನಗೆ ಬಹುದೊಡ್ಡ ಮೋಸವಾಗಿದೆ. ಈ ವಿಚಾರದ ಬಗ್ಗೆ ನನ್ನ ತಂದೆಗೆ ತಿಳಿಸಿದೆ ಅವರಿಗೂ ಶಾಕ್ ಆಗಿದ್ದು, ಬಳಿಕ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಸೈಯ್ಯದ್ ಹೇಳಿದ್ದಾನೆ.

ಆತನ ಕುಟುಂಬದವರು ನಮ್ಮಿಂದ ಸತ್ಯವನ್ನು ಮುಚ್ಚಿದ್ದಾರೆ. ಇದೇ ಕಾರಣದಿಂದ ನಾವು ಪೊಲೀಸರಿಗೆ ಮೋಸ ಮಾಡಿದ್ದಾರೆಂದು ದೂರು ನೀಡಿದ್ದೇವೆ ಎಂದು ಸೈಯದ್ ತಂದೆ ಯಕುಬ್ ಅವರು ತಿಳಿಸಿದ್ದಾರೆ.

ಸದ್ಯಕ್ಕೆ ಕುಟುಂಬಸ್ಥರ ವಿರುದ್ಧ ವಂಚನೆಯ ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಶಿವಾಜಿನಗರ ಠಾಣೆಯ ಇನ್ಸ್ ಪೆಕ್ಟರ್ ದೀಪಕ್ ಪಗಾರೆ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *